ಮಂಡ್ಯದಲ್ಲಿಂದು ಸುಮಲತಾರಿಂದ ಬೃಹತ್ ಸಮಾವೇಶ, ಸಿಎಂ ರೋಡ್ ಶೋ

ಮಂಡ್ಯ:  ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ್ದರಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್,  ಬೃಹತ್ ಸಮಾವೇಶ ನಡೆಸಲಿದ್ದಾರೆ. ಸ್ವಾಭಿಮಾನಿಗಳ ಸಮ್ಮಿಲನ ಹೆಸರಲ್ಲಿ ಸಮಾವೇಶ ನಡೆಯಲಿದ್ದು,  ಬೃಹತ್ ರ‌್ಯಾಲಿ ಮೂಲಕ ಸುಮಲತಾ​ ಮತಯಾಚನೆ ಮಾಡಲಿದ್ದಾರೆ. ನಗರದ ಕಾಳಿಕಾಂಭ ದೇವಿಗೆ ಪೂಜೆ ಸಲ್ಲಿಸಿ ಱಲಿಯನ್ನ ಆರಂಭಿಸಲಿದ್ದಾರೆ. ಱಲಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿಷೇಕ್ ಅಂಬರೀಶ್ ಪ್ರಚಾರ ನಡೆಸಲಿದ್ದಾರೆ. ನಂತರ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್​ನಲ್ಲಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ.

ಇನ್ನೊಂದೆಡೆ, ಸಿಎಂ ಕುಮಾರಸ್ವಾಮಿ ಕೂಡ ಇಂದು ಪುತ್ರನ ಪರ ಮಂಡ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಮತಬೇಟೆ ನಡೆಸಲಿದ್ದಾರೆ. ಬೆಳಗ್ಗೆ 11ಗಂಟೆಗೆ ನಿಖಿಲ್ ಪರ ಬಸರಾಳು ಗ್ರಾಮದಲ್ಲಿ ಪ್ರಚಾರ ನಡೆಸಲಿದ್ದು, ಮಧ್ಯಾಹ್ನದಿಂದ ಸಂಜೆಯವರೆಗೂ  ನಗರದಲ್ಲಿ ಸಿಎಂ ರೋಡ್ ಶೋ ನಡೆಸುವ ಮೂಲಕ ಮಗನ ಗೆಲುವಿಗೆ ಅಂತಿಮ ಹಂತದ ಕಸರತ್ತು ನಡೆಸಲಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv