ಸೂಳೆಕೆರೆಯ 4 ಗುಡ್ಡದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸಂಕ್ರಾಂತಿ ಹಬ್ಬಕ್ಕೆ ಬಂದವರಿಗೆ ಕೆರೆಯ ಕೆರೆಬಿಳಚಿ, ಸೂಳೆಕೆರೆ, ರುದ್ರಾಪುರ ಗ್ರಾಮಗಳ ನಾಲ್ಕು ಗುಡ್ಡದಲ್ಲಿ ಕಾಡ್ಗಿಚ್ಚಿನ ದರ್ಶನವಾಗಿದೆ. ಗುಡ್ಡಗಳಲ್ಲಿ ಬೆಂಕಿ ಹೊತ್ತಿಯುರಿಯುತ್ತಿದೆ. ಗಿಡಮರಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗುತ್ತಿವೆ. ವಿದ್ಯುತ್ ತಂತಿ ಹರಿದ ಜಾಗದಲ್ಲು ಬೆಂಕಿ ಹೊತ್ತಿಯುರಿಯುತ್ತಿದೆ. ಗುಡ್ಡಗಳಲ್ಲಿ ಹಗಲು ರಾತ್ರಿಯನ್ನದೆ ಬೆಂಕಿ ಹುರಿಯುತ್ತಿದ್ದರು ಜಿಲ್ಲಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಹಚ್ಚಹಸಿರಿನ ಗುಡ್ಡಗಳಲ್ಲಿ ಬೂದಿ ಬೂದಿ ಹೊಗೆ ಕಾಣಿಸುತ್ತಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv