ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಂಟ್ರಾಕ್ಟರ್

ದಾವಣಗೆರೆ: ಕಂಟ್ರಾಕ್ಟರ್ ಒಬ್ರು ವಿಡಿಯೋ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ದಾವಣಗೆರೆಯ ಜಗಳೂರಿನ ಕಿಽಡಾಂಗಣದಲ್ಲಿ ನಡೆದಿದೆ. ಕಂಟ್ರಾಕ್ಟರ್ ನಾಗಭೂಷಣ್‌ ಅನ್ನೋ ವ್ಯಕ್ತಿ, ಕಣ್ಣಿರು ಹಾಕುತ್ತಾ ವಿಷ ಸೇವಿಸಿ, ಅದನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದ. ವಿಡಿಯೋ ನೋಡಿದ ಸ್ನೇಹಿತರು ಸ್ಥಳಕ್ಕೆ ಧಾವಿಸಿ ನಾಗಭೂಷಣ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪತ್ನಿಗೆ ಉದ್ಯೋಗ ಕೊಡಿಸುತ್ತೇನೆ ಅಂತಾ ನಾಗಭೂಷಣ್ ಚಿಕ್ಕಪ್ಪ ಮತ್ತು ಅಕ್ಕ 4 ಲಕ್ಷ ಹಣ ಇಸ್ಕೊಂಡಿದ್ರು. ಈಗ ಸರ್ಕಾರಿ ಕೆಲಸಾನೂ ಸಿಕ್ಕಿಲ್ಲ. ಹಣವೂ ವಾಪಸ್ ಕೇಳಿದ್ರೆ ಕೊಡ್ತಿಲ್ಲ. ಇವರಿಬ್ಬರ ಮೋಸಕ್ಕೆ ನಾನು ಬಲಿಯಾಗುತ್ತಿದ್ದೇನೆ. ನಾನು ಸತ್ತ ಮೇಲೆ ನನ್ನ ಹೆಂಡ್ತಿ ಮಕ್ಕಳಿಗೆ ನ್ಯಾಯ ಕೊಡಿೞ ಅಂತ ವಿಡಿಯೋ ಮೂಲಕ ನಾಗಭೂಷಣ್ ಮನವಿ ಮಾಡಿಕೊಂಡಿದ್ದಾರೆ. ನಾಗಭೂಷಣ್‌ ವಿಡಿಯೋ ಕಳುಹಿಸುತ್ತಿದ್ದಂತೆ ಸ್ಥಳಕ್ಕೆ ಸ್ನೇಹಿತರು ಧಾವಿಸಿ ಕೂಡಲೆ ಜಗಳೂರು ಸರ್ಕಾರಿ ಆಸ್ಪತ್ರೆ ಗೆ ಸೇರಿಸಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದ ಕಾರಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv