ಸ್ಮಶಾನದಲ್ಲೆ ನೇಣಿಗೆ ಶರಣಾದ ವ್ಯಕ್ತಿ!

ರಾಮನಗರ: ಸಂಬಂಧಿಕರಿಗೆ ತೊಂದರೆ ಕೊಡಬಾರದು ಅನ್ನೋ ಭಾವನೆಯಿಂದಲೋ ಏನೋ ಗೊತ್ತಿಲ್ಲ. ಸ್ಮಶಾನದಲ್ಲೇ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಎಪಿಎಂಸಿ ಬಳಿಯ ಸ್ಮಶಾನದಲ್ಲಿ ನಡೆದಿದೆ. 43ವರ್ಷದ ಆಂಥೋಣಿ ನೇಣಿಗೆ ಶರಣಾಗಿದ್ದು, ಈತ ರಾಮನಗರದ ಟ್ರೂಪ್ ಲೈನ್ ನಿವಾಸಿ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಐಜೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *