ಭಜ್ಜಿ ಮನೆಯಲ್ಲಿ ಬ್ರೇಕ್​ಫಾಸ್ಟ್​​​ ಸವಿದ ಸುಧೀರ್​ ಗೌತಮ್​..!

ಟೀಮ್ ಇಂಡಿಯಾದ ಬಿಗ್​ ಫ್ಯಾನ್​ ಸುಧೀರ್​​ ಗೌತಮ್​​​​, ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್​ ಮನೆಗೆ ತೆರಳಿದ್ರು. ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​​ ಅವರ ಕಟ್ಟಾ ಅಭಿಮಾನಿಯೂ ಆಗಿರುವ ಸುಧೀರ್,​​ ಮೊನ್ನೆ ಮೊನ್ನೆ ತಾನೆ ಕ್ಯಾಪ್ಟನ್​ ಕೂಲ್​ ಧೋನಿ ಮನೆಯಲ್ಲಿ ಆತಿಥ್ಯ ಸವಿದು ಸುದ್ದಿಯಾಗಿದ್ರು.

ಧೋನಿ ಆಯ್ತು ಈಗ ಭಜ್ಜಿಗೆ ಇವರೇ ಗೆಸ್ಟ್​​​..!
ಭಾರತೀಯ ಕ್ರಿಕೆಟ್​ ತಂಡದ ಪಂದ್ಯಗಳ ಸಮಯದಲ್ಲಿ, ತ್ರಿವರ್ಣ ಧ್ವಜದೊಂದಿಗೆ ಕಾಣಿಸಿಕೊಳ್ಳುವ ಗೌತಮ್​ ಬಗ್ಗೆ ತಿಳಿಯದವರೇ ಇಲ್ಲ. ಇತ್ತೀಚಿಗೆ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಫಾರ್ಮ್​​​ ಹೌಸ್​ಗೆ ತೆರಳಿ ಸುದ್ದಿ ಮಾಡಿದ್ದ ಸುಧೀರ್​ ಗೌತಮ್,​ ಈಗ ಸಿಎಸ್​​ಕೆ ಸ್ಪಿನ್ನರ್​​​ ಹರ್ಭಜನ್​ ಸಿಂಗ್​​​ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ. ಈ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿರುವ ಭಜ್ಜಿ ಟ್ವಿಟರ್​​ನಲ್ಲಿ ಪೋಸ್ಟ್​​ ಒಂದನ್ನ ಹಾಕಿದ್ದಾರೆ.

ಐಪಿಎಲ್​ 11 ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್​ಕಿಂಗ್ಸ್​​ ಪರ ಅಖಾಡಕ್ಕಿಳಿದಿದ್ದ ಸ್ಪಿನ್ನರ್​​ ಹರ್ಭಜನ್​ ಸಿಂಗ್​, 4 ಬಾರಿ ಐಪಿಎಲ್​ ಚಾಂಪಿಯನ್​ ಗೆಲುವಿನಲ್ಲಿ ಭಾಗವಾಗಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದ ಭಜ್ಜಿ, ಮುಂಬೈ 3 ಬಾರಿ ಚಾಂಪಿಯನ್​​ ಪಟ್ಟಕ್ಕೇರಿದಾಗಲೂ ತಂಡದಲ್ಲಿದ್ರು. ಇನ್ನು ಈ ಬಾರಿ ಸಿಎಸ್​ಕೆ ಸೇರಿದ ಹರ್ಭಜನ್,​ ಮತ್ತೊಮ್ಮೆ ಐಪಿಎಲ್​ ಚಾಂಪಿಯನ್ ತಂಡದ ಭಾಗವಾಗಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv