ರೈತ ಮಹಿಳೆಯಂತೆ ರಾಶಿ ಪೂಜೆ ಮಾಡಿ ಸರಳತೆ ಮೆರೆದ ಸುಧಾ ಮೂರ್ತಿ

ಮೈಸೂರು: ಇನ್ಫೋಸಿಸ್ ಫೌಂಡೇಶನ್​ ಮುಖ್ಯಸ್ಥೆ  ಸುಧಾ ಮೂರ್ತಿಯವರು ಎಷ್ಟು ಸಿಂಪಲ್​ ಅಂತಾ ಎಲ್ಲಾರಿಗೂ ಗೊತ್ತು. ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ  ಮತ್ತೊಂದು ನಿದರ್ಶನ ಸಿಕ್ಕಿದೆ. ಇನ್ಫೋಸಿಸ್ ಸಂಸ್ಥೆ ಬಳಿಯ ಕಣದಲ್ಲಿ ರಾಗಿ ರಾಶಿಗೆ ಪೂಜೆ ಮಾಡುವ ಮೂಲಕ, ಸುಧಾ ಮೂರ್ತಿ ಸಾಮಾನ್ಯ ರೈತ ಮಹಿಳೆಯಂತೆ ಕಂಡುಬಂದ್ರು. ಸುಗ್ಗಿ ಸಂದರ್ಭದಲ್ಲಿ ರೈತರು ಮಾಡುವ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗಿಯಾದ ಅವರು, ರಾಗಿ ರಾಶಿಗೆ ಪೂಜೆ ಮಾಡಿ  ಶಿರಬಾಗಿ ನಮಸ್ಕರಿಸಿದ್ರು. ಸದ್ಯ ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸುಧಾ ಮೂರ್ತಿ ಅವರ ಸರಳತೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv