ಕೊಡಗಿನ ಜನರಿಗೆ 25 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ: ಸುಧಾಮೂರ್ತಿ ಭರವಸೆ

ಮೈಸೂರು: 25 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಡಗಿನ ಜನರಿಗೆ ಮನೆ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಸರ್ಕಾರದಿಂದ ಸವಲತ್ತು ಕೊಟ್ರೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಕೊಡಗಿನ ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.
ನಾಡಹಬ್ಬ ಮೈಸೂರು ದಸರಾವನ್ನ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಇನ್ಫೋಸಿಸ್ ಪ್ರತಿಷ್ಠಾನದ ಕೆಲಸಗಳು ಉಪಕಾರವಲ್ಲ. ಅದು ನಮ್ಮ ಕರ್ತವ್ಯ. ಇದು ದಾನದ ಕೆಲಸ. ನಮ್ಮ ಪ್ರತಿಷ್ಠಾನದ ವತಿಯಿಂದ ನೊಂದ ಕೊಡಗಿನವರಿಗೆ ಸಹಾಯ ಮಾಡಬೇಕು. ನಂತರ ಮೈಸೂರಿನ ಹೆಬ್ಬಾಳ ಕೆರೆ ಪ್ರದೇಶ ಅಭಿವೃದ್ಧಿಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv