ಸಲ್ಲು ಸಿನಿಮಾದಲ್ಲಿ ಕಿಚ್ಚನ ಹೆಸರೇನು ಗೊತ್ತಾ..?

ಕಿಚ್ಚ ಸುದೀಪ್​ ಈಗ ಪೈಲ್ವಾನ್​ ಆಗಿ, ಕೋಟಿಗೊಬ್ಬನಾಗಿ ಬಂದು ಅಭಿಮಾನಿಗಳ ಮನತಣಿಸೋಕೆ ಸಿದ್ಧತೆ ನಡೆಸ್ತಿದ್ದಾರೆ. ಈ ಎಲ್ಲಾ ನಿರೀಕ್ಷೆಗಳ ಜೊತೆಗೆ ಬಾಲಿವುಡ್​ನಲ್ಲಿ ಮತ್ತೊಮ್ಮೆ ತಮ್ಮ ಯುಗ ಆರಂಭಿಸುವ ಸೂಚನೆ ಕೊಟ್ಟಿದ್ದಾರೆ. ಬಾಲಿವುಡ್​ ಬ್ಯಾಡ್ ಬಾಯ್​ ಸಲ್ಮಾನ್​ ಖಾನ್​ ನಟನೆಯ ‘ದಬಂಗ್​-3’ ನಲ್ಲಿ ಸುದೀಪ್​ ನಟಿಸ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಆ ಸಿನಿಮಾದಲ್ಲಿ ಕಿಚ್ಚನ ಹೆಸರೇನಿರಬಹುದು ಅನ್ನೋ ಪ್ರಶ್ನೆ ಎಲ್ಲರಿಗೂ ಕಾಡುತ್ತೆ. ಅಂದ್ಹಾಗೆ ಕಿಚ್ಚನ ದಬಂಗ್​ ಪಾತ್ರ ಈಗ ರಿವೀಲ್ ಆಗಿದೆ. ಸಲ್ಲುಮಿಯಾ ಎದುರು ಕಿಚ್ಚ ‘ಸಿಖಂದರ್​ ಭಾರಧ್ವಜ್​’ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇಷ್ಟರಲ್ಲೇ ಶೂಟಿಂಗ್​ನಲ್ಲೂ ಸುದೀಪ್ ಭಾಗಿಯಾಗಲಿದ್ದಾರೆ.

ಇನ್ನು ಚುಲ್‌ಬುಲ್‌ ಪಾಂಡೆ ಹೆಸರಿನ ಪಾತ್ರದಲ್ಲಿ ಸಲ್ಮಾನ್ ಮತ್ತೆ ಮಿಂಚಲಿದ್ದಾರೆ. ಚಿತ್ರದಲ್ಲಿ ನಾಯಕ ಮತ್ತು ಖಳನಾಯಕನ ನಡುವೆಯೇ ಆಟ ನಡೆಯಲಿದ್ದು, ಅದು ಟಾಮ್‌ ಮತ್ತು ಜೆರಿಯ ಹೊಡೆದಾಟದಂತಿರಲಿದೆ ಎನ್ನಲಾಗಿದೆ. ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿರಲಿದ್ದು, ಪ್ರಭುದೇವ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರ ಈ ವರ್ಷದ ಡಿಸೆಂಬರ್‌ನಲ್ಲಿ, ಅಂದರೆ ಕ್ರಿಸ್‌ಮಸ್‌ಗೆ ರಿಲೀಸ್ ಆಗುವ ನಿರೀಕ್ಷೆ ಇದೆ. ಈಗಾಗ್ಲೇ ಬಾಲಿವುಡ್‌ನಲ್ಲಿ ತಮ್ಮ ಛಾಪನ್ನ ಒತ್ತಿರೋ ಕಿಚ್ಚ, ಸಲ್ಮಾನ್ ಖಾನ್ ಜೊತೆ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು ಸುದೀಪ್ ಪಾತ್ರ ಹೇಗಿರಲಿದೆ ಅನ್ನೋದು ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv