‘ನಿನ್ನೆ ಮೊನ್ನೆ ಬಂದೊರೆಲ್ಲಾ ನಂ.1’ ಲಿರಿಕ್ಸ್​ಗೆ ಸುದೀಪ್​​​​​​ ರಿಯಾಕ್ಷನ್​..!

ಇದೇ ದಸರಾ ಹಬ್ಬಕ್ಕೆ ತೆರೆಗೆ ಬರ್ತಾ ಇರೋ ಸುದೀಪ್​ ಹಾಗು ಶಿವಣ್ಣ ಅಭಿನಯದ ದಿ ವಿಲನ್​ ಸಿನಿಮಾ ಶುರುವಾದಾಗಿಂದ್ಲು ಟಾಕ್​ ಆಗಿ, ರಿಲೀಸ್​ ಹತ್ರಕ್ಕೆ ಬಂದಾಗ ಹಲವು ವಿಷಯಗಳಿಗೆ ಸೌಂಡ್​ ಮಾಡ್ತಾ ಇದೆ. ಚಿತ್ರ ಹಾಡುಗಳು ಮಿಲಿಯನ್​ ಗಟ್ಲೆ ವ್ಯೂವ್ಸ್​ ಸಂಪಾದಿಸ್ತಾ ಇದ್ರೆ. ಹಾಡಿನ ಲಿರಿಕ್ಸ್​ ಮತಷ್ಟು ಕ್ರೇಜ್​ ಹುಟ್ಟು ಹಾಕಿದೆ, ಅದ್ರಲ್ಲು ಟಿಕ್​ ಟಿಕ್​ ಸಾಂಗ್​ನಲ್ಲಿ ಪ್ರೇಮ್​​ ಬರೆದಿರೋ ಸಾಲುಗಳು ಹಲವು ಬಾರಿ ಚರ್ಚೆಗೆ ಕಾರಣವಾಗಿತ್ತು. ನಿನ್ನೆ ಮೊನ್ನೆ ಬಂದೋರೆಲ್ಲಾ ನಂಬರ್​ 1 ಅಂತಾರೋ, ನಿಂಗ್​ ನಂಬರ್​ಗಳೇ ಲೆಕ್ಕ ಇಲ್ಲಣ್ಣ ಅಂತ ಶಿವಣ್ಣನ ಸ್ಟಾರ್​​ಗಿರಿಯನ್ನ ಹೊಗಳೋ ಸಾಲು, ರೆಕಾರ್ಡಿಂಗ್​ ಟೈಮ್​ನಲ್ಲಿ ಹಾಗೆ ಪ್ರೇಮ್​ ಬಾಯಿಗೆ ಬಂದಿದ್ದಂತೆ, ಅದೇ ಇರ್ಲಿ ಅಂಥ ಅರ್ಜುನ್​ ಜನ್ಯ ಪಟ್ಟು ಹಿಡಿದ್ರಂತೆ. ಫೈನಲಿ ಪ್ರೇಮ್​​​ ತಮ್ಮದೇ ವಾಯ್ಸ್​ನಲ್ಲಿ ಆ ಸಾಲುಗಳನ್ನ ಹಾಡಿದ್ರು.ಈಗ ಆ ಲಿರಿಕ್ಸ್​ ಎಲ್ಲಾ ಕಡೆ ವೈರಲ್​ ಆಗ್ತಾ ಇದೆ.


ಕಿಚ್ಚನಿಗೆ ಸಖತ್​ ಇಷ್ಟ ವಾಗಿತ್ತು ಲಿರಿಕ್ಸ್​..!
ಈ ಸಾಲುಗಳನ್ನ ಕೇಳಿದ ಕಿಚ್ಚ ಸುದೀಪ್​​ ಈ ಸಾಲುಗಳನ್ನ ಶಿವಣ್ಣನಿಗೆ ಮಾತ್ರ ಬರೆಯೋದಕ್ಕೆ ಸಾಧ್ಯ. ಅಂಡ್​ ಪ್ರೇಮ್​ ಮಾತ್ರ ತಮ್ಮ ಹಾಡಿನಲ್ಲಿ ಇದನ್ನ ಬರಯೋದಕೆ ಸಾಧ್ಯ, ಅಂತ ಖುಷಿ ಪಟ್ಟಿದ್ರಂತೆ. ಜೊತೆಗೆ ಪ್ರೇಮ್​ ಅವ್ರೇ ಸಿನಿಮಾದ ಎಲ್ಲಾ ಹಾಡುಗಳನ್ನ ಬರೆಯೋದು ಕಿಚ್ಚ ಸುದೀಪ್​ ಅವ್ರ ಆಸೆಯಾಗಿತ್ತಂತೆ. ಅದರಂತೆ ಪ್ರೇಮ್​ ಹಾಡುಗಳನ್ನ ಬರೆದಿದ್ದಾರೆ. ಹಾಡುಗಳು ಸೂಪರ್​ ಹಿಟ್​ ಆಗಿವೆ. ಇದಕ್ಕೆ ಶಿವಣ್ಣ ಹಾಕಿರೋ ಸ್ಟೆಪ್ಸ್​ನ ಝಲಕ್​ ನೋಡಿರೋ ಜನ, ಫುಲ್ ಹಾಡು ನೋಡೋಕೆ ಕಾಯ್ತಾ ಇದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv