ಶಶಿ ತರೂರ್​​ಗೆ ತಲೆಕೆಟ್ಟಿದೆ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ವಿವಾದಾತ್ಮಕ ಹೇಳಿಕೆಗೆ ಕೇಸರಿ ಪಾಳಯ ಕೆಂಡಕಾರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ದೇಶ ಹಿಂದು ಪಾಕಿಸ್ತಾನವಾಗಿ ಬದಲಾಗುತ್ತೆ ಅಂತ ಶಶಿ ತರೂರ ಹೇಳಿಕೆ ನೀಡಿದ್ರು. ತರೂರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್‌ಸ್ವಾಮಿ, ಶಶಿ ತರೂರ್ ತಮ್ಮ ಮಾನಸಿಕ ಸ್ಥಿಮಿತೆಯನ್ನ ಕಳೆದುಕೊಂಡಿದ್ದಾರೆ ಅಂತ ವಾಕ್‌ಪ್ರಹಾರ ನಡೆಸಿದ್ದಾರೆ. ಹಿಂದುಗಳು ಸರ್ವಾಧಿಕಾರಿಗಳಲ್ಲ. ಬೇಕಿದ್ದರೆ ತರೂರ್ ಪಾಕಿಸ್ತಾನಕ್ಕೇ ಹೋಗಲಿ ಅಂತ ಹೇಳಿದ್ದಾರೆ. ಹಿಂದೂ ಪಾಕಿಸ್ತಾನ ಎಂಬ ಶಬ್ದ ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಇತ್ತೀಚೆಗೆ ಬಿಡುಗಡೆಗೊಂಡ ಶಶಿ ತರೂರ್ ಬರೆದ ನಾನೇಕೆ ಹಿಂದೂ( Why I am Hindu) ಪುಸ್ತಕದಲ್ಲಿ ಈ ವಿಷಯದ ಬಗ್ಗೆ ಉದ್ದನೆಯ ವಿವರ ನೀಡಿದ್ದಾರೆ. ಅಲ್ಲದೇ ಸುನಂದಾ ನೋವಿಗೆ ಕಾರಣವಾಗಿದ್ದು ಕೂಡ ಒಬ್ಬ ಪಾಕಿಸ್ತಾನಿ ಮಹಿಳೆ. ಅವರಿಗೆ ಪಾಕಿಸ್ತಾನದೊಂದಿಗೆ ಅಂತಹ ಸಂಬಂಧವೇ ಬೇಕಾಗಿದ್ದಲ್ಲಿ ಯಾಕೆ ಪಾಕಿಸ್ತಾನಕ್ಕೆ ಹೊರಟು ಹೋಗಬಾರದು. ಶಶಿ ಇತ್ತೀಚೆಗೆ ಪೊಲೀಸರು ಹಾಕಿದ ಚಾರ್ಜ್​ಶೀಟ್​ನಿಂದಾಗಿ ಮಾನಸಿಕ ಸ್ಥಿಮಿತೆ ಕಳೆದುಕೊಂಡಿದ್ದಾರೆ ಅಂತ ಸ್ವಾಮಿ ಕಿಡಿಕಾರಿದ್ದಾರೆ