ಈ ಹದ್ದಿನ ಫೋಟೋಗೆ ಜನರು ಫಿದಾ..!

ಫೋಟೋಗ್ರಾಫರ್​ಗೆ ಅತ್ಯಂತ ಮುಖ್ಯವಾಗಿ ಬೇಕಿರೋದು ತಾಳ್ಮೆ. ಅದರಲ್ಲೂ ವೈಲ್ಡ್​ ಲೈಫ್ ಪೋಟೋಗ್ರಾಫರ್ಸ್​ಗೆ ಇದು ಇನ್ನೂ ಮುಖ್ಯ. ಅದಕ್ಕೆ ಊರು, ಮನೆ ಬಿಟ್ಟು ಸುಂದರ ಪ್ರಕೃತಿ​, ಹಕ್ಕಿ, ಪ್ರಾಣಿ, ಪರಿಸರದಂತಹ ಪೋಟೊ ತೆಗೆಯಲು ಎಲ್ಲೆಂದರಲ್ಲಿ ತಿರುಗುತ್ತಿರುತ್ತಾರೆ. ಅವರು ತೆಗೆಯುವ ಚಿತ್ರಗಳು ಕೂಡ ಅದ್ಭುತವಾಗಿರುತ್ತವೆ. ಇಂಥ ಫೋಟೋನ ಜೀವನದಲ್ಲಿ ಒಮ್ಮೆ ಮಾತ್ರ ತೆಗೆಯೋಕೆ ಸಾಧ್ಯ ಅಂತ ಖುದ್ದು ಆ ಫೋಟೋಗ್ರಾಫರ್​ಗಳೇ ಹೇಳುವಷ್ಟು ಬ್ಯೂಟಿಫುಲ್ ಆಗಿರುತ್ತೆ. ಸದ್ಯ ಇಂಥದ್ದೇ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಲ್​ಚಲ್ ಸೃಷ್ಟಿಸಿದೆ.
ಹದ್ದುಗಳ ಬೇರೆ ಬೇರೆ ರೀತಿಯ ಫೋಟೋ ನೋಡಿರ್ತೀರಿ. ಆದ್ರೆ, ಹದ್ದಿನ ಪ್ರತಿಬಿಂಬವಿರುವ ಅದ್ಭುತ ಫೋಟೋವನ್ನ ಕೆನಡಾದ ಸ್ಟೀವ್ ಬಿರೋ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಕೆರೆಯಲ್ಲಿ ಬಿಳಿ ಮುಖದ, ಕಪ್ಪು ಮೈ ಬಣ್ಣದ ಹದ್ದು ತನ್ನ ಎರಡು ರೆಕ್ಕೆಗಳನ್ನ ಉದ್ದಕ್ಕೆ ಚಾಚಿ ತಿಳಿ ನೀರಿನ ಮೇಲೆ ಹಾರಿಕೊಂಡು ಹೋಗುತ್ತಿರುವ ಚಿತ್ರ ಇದಾಗಿದೆ. ನೀರಿನಲ್ಲಿ ಹದ್ದಿನ ಪ್ರತಿಬಿಂಬವೂ ಸ್ಪಷ್ಟವಾಗಿ ಕಾಣುತ್ತದೆ. ಸ್ಟೀವ್​ ಕಳೆದ 10 ವರ್ಷಗಳಿಂದ ಪೋಟೋಗ್ರಫಿ ಮಾಡ್ತಿದ್ದಾರೆ. ಸದ್ಯ ಅವರ ಈ ಹದ್ದಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

I decided to repost as my cover with a watermark as this eagle is getting shared more than I imagined!

Posted by Steve Biro on Sunday, May 19, 2019

 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv