ಜಿಮ್​ ಬಿಡಿ, ವಾಕಿಂಗ್​​ ಮಾಡಿದ್ರೆ ಆಯಸ್ಸು ಜಾಸ್ತಿಯಾಗುತ್ತೆ

ಫಿಟ್​​ ಆಗಿರ್ಬೇಕು ಅಂತ ಪ್ರತಿಯೊಬ್ಬರು ಇಷ್ಟ ಪಡ್ತಾರೆ. ಆದ್ರೆ ಅದಕ್ಕೆ ತುಂಬಾ ಕಷ್ಟಪಡ್ತಾರೆ. ಕೆಲವರು ಏರೋಬಿಕ್ಸ್​, ಜುಂಬಾ, ಸೈಕ್ಲಿಂಗ್​ ಮೊರೆ ಹೋದ್ರೆ ಇನ್ನೂ ಕೆಲವರು ಪ್ರತಿ ನಿತ್ಯ ಜಿಮ್​​ನಲ್ಲಿ ವರ್ಕ್​ಔಟ್​ ಮಾಡ್ತಾರೆ. ಆದ್ರೆ ಫಿಟ್​ ಆಗೋಕೆ ನೀವು ಜಿಮ್‌ಗೆ​ ಹೋಗೋ ಅಗತ್ಯನೇ ಇಲ್ಲ. ಯಾಕಂದ್ರೆ ಜಿಮ್​​ಗೆ ಹೋದ್ರೆ ಮಾತ್ರ ಫಿಟ್​​ ಆಗಿರ್ತಾರೆ ಅನ್ನೋ ಮಾತು ಸುಳ್ಳಂತೆ. ಒಂದು ವಾರದಲ್ಲಿ 6 ಗಂಟೆ ವಾಕಿಂಗ್​​ ಮಾಡಿದ್ರೆ ಸಾಕು. ನೀವು ಫಿಟ್​ ಆಂಡ್‌​​ ಫೈನ್​​ ಆಗಿ ಇರಬಹುದು ಅಂತ ಅಮೆರಿಕನ್ ಕ್ಯಾನ್ಸರ್​ ಸೊಸೈಟಿ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಹಾರ್‌ವರ್ಡ್‌​​ ಮೆಡಿಕಲ್​ ಸ್ಕೂಲ್​​ ಅಧ್ಯಯನದ ಪ್ರಕಾರ ಪ್ರತಿನಿತ್ಯ ವಾಕಿಂಗ್​​​ ಹೋಗೋದ್ರಿಂದ ಹೃದಯ ರಕ್ತನಾಳದ ಕಾಯಿಲೆ ಬರೋದನ್ನ ಶೇಕಡ 31 ರಷ್ಟು ತಡೆಗಟ್ಟಬಹುದು. ಅದರ ಜೊತೆಗೆ ಆಯಸ್ಸು ವೃದ್ಧಿಸುತ್ತಂತೆ. ಆದ್ದರಿಂದ ನೀವು ಜಿಮ್​ಗೆ ಹೋಗಿಲ್ಲ ಅಂತ ವ್ಯಥೆ ಪಡಬೇಕಾಗಿಲ್ಲ. ಬದಲಾಗಿ ಸ್ವಲ್ಪ ಸಮಯವನ್ನು ವಾಕಿಂಗ್​​​ಗಾಗಿ ಮೀಸಲಿಟ್ಟರೆ ಸಾಕು ಅನ್ನೋದನ್ನು ಈ ವರದಿ ಹೇಳ್ತಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv