ಶಾಮಿಯಾನದಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.!

ದಾವಣಗೆರೆ: ಪರೀಕ್ಷೆ ಬರೆಯಲು ಕೊಠಡಿಗಳಿಲ್ಲದೆ, ಕಾಲೇಜು ಸಿಬ್ಬಂದಿ ಕಾಲೇಜು ಆವರಣದಲ್ಲಿ ಶಾಮಿಯಾನ ಹಾಕಿಸಿ ಪರೀಕ್ಷೆ ಬರೆಸಿರೋ ಘಟನೆ ಹರಪನಹಳ್ಳಿ ಸರ್ಕಾರಿ ಪದವಿ ಕಾಲೇಜಿ​​ನಲ್ಲಿ ನಡೆದಿದೆ. ಈ ಕಾಲೇಜಿ​​ನಲ್ಲಿ 1,359 ವಿದ್ಯಾರ್ಥಿಗಳಿಗೆ, ಕೇವಲ 7 ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಆದ್ರೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 31 ಕೊಠಡಿಗಳ ಅವಶ್ಯಕತೆ ಇದೆ. ಹೀಗಾಗಿ ಕಾಲೇಜು ಸಿಬ್ಬಂದಿ ಖಾಸಗಿಯವರಿಂದ ಶಾಮಿಯಾನ ಹಾಗೂ ಕುರ್ಚಿಗಳನ್ನ ಬಾಡಿಗೆಗೆ ತಂದು ಪರೀಕ್ಷೆ ಬರೆಸಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv