ಶಿಕ್ಷಣ ಕಲಿಕೆ ಜೊತೆ, ಜೀವದಾನ ಮಾಡೋ ವಿದ್ಯಾರ್ಥಿಗಳು..!

ದಾವಣಗೆರೆ: ನಗರದ ಐಟಿಐ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯ ಜೊತೆ ಸಮಾಜ ಸೇವೆ ಮಾಡುತ್ತಿದ್ದಾರೆ. ಇಲ್ಲಿ ರಕ್ತ ಬೇಡಿ ಬಂದವರಿಗೆ ಬರೀ ಕೈಯಲ್ಲಿ ಕಳುಹಿಸಿದ ಇತಿಹಾಸವೇ ಈ ಕಾಲೇಜಿನಲ್ಲಿ ಇಲ್ಲಾ. ಇದು ವಿದ್ಯಾದಾನದ ಜೊತೆ ಜೀವದಾನ ಮಾಡುತ್ತಿರುವ ರಾಜ್ಯದ ಏಕೈಕ ವಿದ್ಯಾಸಂಸ್ಥೆ ಅಂತಾನೇ ಹೇಳಲಾಗುತ್ತಿದೆ.

ಎಲ್ಲಾ ದಾನಕ್ಕಿಂತ ಶ್ರೇಷ್ಠದಾನ ಅನ್ನದಾನ- ವಿದ್ಯಾದಾನ ಅಂತಾರೆ. ಆದರೆ, ಇದನ್ನ ಯಾರು ಬೇಕಾದರೂ ನೀಡುತ್ತಾರೆ. ಆದರೆ ಜೀವದಾನ ಮಾಡೋರ ಸಂಖ್ಯೆ ತೀರಾ ಕಡಿಮೆ. ಅಂತಹ ಜೀವದಾನ ಮಾಡೋ ವಿಧ್ಯಾರ್ಥಿಗಳ ಗುಂಪೊಂದು ಸಕ್ರಿಯವಾಗಿ ಇಲ್ಲಿ ಕೆಲಸ ಮಾಡುತ್ತಿದೆ. ನಗರದ ಐಟಿಐ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರು ರಕ್ತದಾನ ಮಾಡುತ್ತಿರುವುದು ವಿಶೇಷವಾಗಿದೆ. ಈ ವಿದ್ಯಾರ್ಥಿಗಳು ರಕ್ತದಾನಿಗಳ ಗುಂಪು ಮಾಡಿಕೊಂಡು ಲೈಫ್ ಲೈನ್ ಅನ್ನೋ ಸಂಸ್ಥೆ ಜೊತೆ ಕೆಲಸ ಮಾಡುತ್ತಿದ್ದಾರೆ. ರಕ್ತದ ತುರ್ತು ಅವಶ್ಯಕತೆ ಇದ್ದು ಇಲ್ಲಿಗೆ ಬಂದವರು ಎಂದೂ ರಕ್ತ ಸಿಗದೇ ವಾಪಸ್ ಹೋಗಿಲ್ಲ. ಈ ವಿದ್ಯಾರ್ಥಿಗಳ ಗುಂಪು 1,000 ಕ್ಕೂ ಹೆಚ್ಚು ಅಮೂಲ್ಯ ಜೀವಗಳನ್ನ ಉಳಿಸಿದೆ. ಐಟಿಐ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ಪ್ರತಿ ತಿಂಗಳು ಕನಿಷ್ಠ 20 ಮಂದಿ ಕಡ್ಡಾಯವಾಗಿ ರಕ್ತದಾನ ಮಾಡುತ್ತಾರೆ. ರಕ್ತ ಅರಸಿ ಬಂದವರ ಬಳಿ ನಯಾಪೈಸೆಯೂ ಹಣ ಕೇಳದೆ, ವಿದ್ಯಾರ್ಥಿಗಳು ಉಚಿತವಾಗಿ ರಕ್ತದಾನ ಮಾಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv