ಬಸ್​ ಪಾಸ್​ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ..!

ಬಳ್ಳಾರಿ: ಶಾಲಾ ಕಾಲೇಜು ಶುರುವಾಗಿ ನಾಲ್ಕು ದಿನ ಆಯ್ತು. ಆದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸಿಲ್ಲ. ಹೀಗಾಗಿ ಕೂಡಲೇ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರದ ದುರ್ಗಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಱಲಿ ಬಸ್ ಡಿಪೋಗೆ ತೆರಳಿತು. ನಂತರ ಡಿಪೋ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಎಐಡಿಎಸ್ಓ ಪದಾಧಿಕಾರಿಗಳು ಕೂಡಲೇ ಎಲ್ಲ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಒದಗಿಸಬೇಕು. ಅಥವಾ ಹಳೆಯ ಪಾಸುಗಳನ್ನು ತಾತ್ಕಾಲಿಕವಾಗಿ ಚಾಲ್ತಿಯಲ್ಲಿಡಬೇಕು ಅಂತಾ ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv