ಖಾಸಗಿ ಕೃಷಿ ಕಾಲೇಜುಗಳ ಶಾಶ್ವತ ರದ್ದತಿಗೆ ಆಗ್ರಹಿಸಿ ಪ್ರೊಟೆಸ್ಟ್​​

ರಾಯಚೂರು: ಖಾಸಗಿ ಕೃಷಿ ಕಾಲೇಜುಗಳನ್ನ ಶಾಶ್ವತವಾಗಿ ರದ್ದುಗೊಳಿಸಬೇಕು ಅಂತಾ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿರುವ ಖಾಸಗಿ ರೈಟೆಕ್ ಕೃಷಿ ಸ್ನಾತಕ ಪದವಿಯನ್ನು ನಿರ್ಬಂಧಿಸಬೇಕು.

ಹೊಸದಾಗಿ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಖಾಸಗಿ ಕಾಲೆಜುಗಳಿಂದ ರೈತರ ಮಕ್ಕಳಿಗೆ ಅನ್ಯಾವಾಗಲಿದೆ ಅಂತಾ ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv