ನಾಟಕದ ಮೂಲಕ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ

ಹುಬ್ಬಳ್ಳಿ : ಹುಬ್ಬಳ್ಳಿ ಕೆಎಲ್‌ಇ ಸ್ಕೂಲ್ ವಿದ್ಯಾರ್ಥಿಗಳಿಂದ ಇಂದು ಮತದಾನದ ಕುರಿತು ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಪುನೀತ್ ಅಭಿನಯದ ರಾಜಕುಮಾರ ಸಿನಿಮಾದ ಹಾಡಿನ ಸಾಹಿತ್ಯ ಬದಲಿಸಿ ಮತದಾನದ ಜಾಗೃತಿ ಮೂಡಿಸಿದರು. ಸದೃಢ ಭಾರತ ನಿರ್ಮಾಣಕ್ಕೆ ನಿಮ್ಮ ಮತ ಚಲಾಯಿಸಿ. ಅಮೂಲ್ಯ ಮತವನ್ನು ಹಾಕಲು ಮರೆಯಬೇಡಿ. ಜಾತಿ, ಹೆಂಡ, ಹಣಕ್ಕೆ ನಿಮ್ಮ ಮತ ಮಾರಿಕೊಳ್ಳದಿರಿ. ಯೋಗ್ಯ ಅಭ್ಯರ್ಥಿಗೆ ನಿಮ್ಮ ಮತ ಚಲಾಯಿಸಿ ಎಂದು ಹೇಳಿದರು. ಅಭ್ಯರ್ಥಿಗಳು ಆಸೆ ಆಮಿಷಗಳನ್ನು ಹೇಗೆ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ನಾಟಕ ಮಾಡಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv