ಓಟ್ ಮಾಡಿದವನೇ ಹೀರೋ, ಮತ ಹಾಕಿದವನೇ ಮಹಾಶೂರ.! ಸ್ಟೂಡೆಂಟ್ಸ್ ಜಾಗೃತಿ

ಧಾರವಾಡ: ಧಾರವಾಡದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಚುನಾವಣಾ ಆಯೋಗ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪುಷ್ಪ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿದ್ರು.

ಭಿತ್ತಿ ಪತ್ರದ ಮೂಲಕ ಮತದಾನ ಜಾಗೃತಿ

ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ರು. ಚುನಾವಣಾ ಆಯೋಗ ಸಿದ್ಧಪಡಿಸಿರುವ ಭಿತ್ತಿ ಪತ್ರ ಹಿಡಿದ ಯುವತಿಯರು, ಓಟ್ ಮಾಡಿದವನೇ ಹೀರೋ, ಮತದಾನ ಮಾಡಿದವನೇ ಮಹಾ ಶೂರ!, ಆಮಿಷಕ್ಕೆ ಮರುಳಾಗದಿರಿ, ವಿವಿ ಪ್ಯಾಟ್ ಸತ್ಯದ ಕೈಗನ್ನಡಿ. ಹೀಗೆ ಮತದಾನ ತಪ್ಪದೇ ಮಾಡಿ ಎಂಬ ಸಂದೇಶ ಸಾರುವ ವಿವಿಧ ಭಿತ್ತಿ ಪತ್ರಗಳ ಮೂಲಕ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಕೆಂಪು ಹಳದಿ ಹೂಗಳಲ್ಲಿ ಅಲಂಕರಿಸಿದ ಕರ್ನಾಟಕ ಲಾಂಛನ, ವಿವಿ ಪ್ಯಾಟ್ ಹಾಗೂ ವೋಟಿಂಗ್ ಮಷಿನ್ ನೋಡುಗರ ಗಮನ ಸೆಳೆದವು.ಇವುಗಳ ಜೊತೆಗೆ ಅನೇಕ ಯುವತಿಯರು ಸೆಲ್ಫಿ ಕ್ಲಿಕಿಸಿಕೊಂಡರು.

ಎಲ್ಲ ಯುವಕರು ತಪ್ಪದೇ ಮತದಾನದಲ್ಲಿ ಭಾಗವಹಿಸಿ, ತಮ್ಮ ಹಕ್ಕನ್ನು ಚಲಾವಣೆ ಮಾಡಬೇಕು, ಯಾವುದೇ ಅಭ್ಯರ್ಥಿಗಳ ಆಮಿಷಕ್ಕೆ ಬಲಿಯಾಗದೇ, ತಮ್ಮ ಮತ ಚಲಾವಣೆ ಮಾಡಬೇಕು ಎಂದು ಡಿಸಿ ಕರೆ ನೀಡಿದ್ರು. ನಗರದ ಇಂದಿರಾ ಗಾಜಿನ ಮನೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪುಷ್ಪ  ಪ್ರದರ್ಶನ ನಡೆಯಲಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv