ಅರುಣಾಚಲಪ್ರದೇಶ, ಅಸ್ಸಾಂನಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲು

ಅರುಣಾಚಲಪ್ರದೇಶ: ಈಶಾನ್ಯ ಭಾರತದಲ್ಲಿ ಭೂಮಿ ಕಂಪಿಸಿದ ವರದಿಯಾಗಿದೆ. ಅಸ್ಸಾಂ, ಅರುಣಾಚಲಪ್ರದೇಶ, ಚೀನಾದ ಗಡಿಭಾಗ, ಟಿಬೆಟಿಯನ್ ಮತ್ತು ಮಯನ್ಮಾರ್​ನಲ್ಲಿ ಭೂಮಿ ನಡುಗಿದೆ. ಅಮೆರಿಕಾ ಜಿಯೊಲಾಜಿಕಲ್ ಸರ್ವೇ (USGS) ಪ್ರಕಾರ ಈಶಾನ್ಯ ಭಾರತದಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1 ರಷ್ಟು ಇದೆ ಅಂತಾ ಮಾಹಿತಿ  ನೀಡಿದೆ.

ಅಸ್ಸಾಂನ ದಿಬ್ರುಗರ್ ​ಪಟ್ಟಣ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಇಲ್ಲಿನ ಸುತ್ತಮುತ್ತ ಅಂದ್ರೆ 114 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಭಾಗದಲ್ಲಿ 5.9 ರಷ್ಟು ತೀವ್ರತೆ ದಾಖಲಾಗಿದೆ ಅಂತಾ ಯುಎಸ್​ಜಿಎಸ್​​ ಹೇಳಿದೆ. ಇನ್ನು, India Meteorological Department ನೀಡಿರುವ ಮಾಹಿತಿ ಪ್ರಕಾರ, ಮಧ್ಯರಾತ್ರಿ 1.45 ರ ಸುಮಾರಿಗೆ ಭೂಮಿ ನಡುಗಿದೆ. ಅರುಣಾಚಲ ಪ್ರದೇಶದ ವೆಸ್ಟ್ ಸಿಯಾಂಗ್​ ಭೂಕಂಪನದ ಕೇಂದ್ರ ಬಿಂದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.8 ರಷ್ಟಿದೆ ಅಂತಾ ಹೇಳಿದೆ.

ಚೀನಾದ ನ್ಯೂಸ್​ ಎಜೆನ್ಸಿಗಳೂ ಕೂಡ ಟಿಬೆಟಿಯನ್​​ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಅಂತಾ ವರದಿ ಮಾಡಿವೆ. ಇತ್ತ ನೇಪಾಳದಲ್ಲೂ ಭೂಮಿ ನಡುಗಿರುವ ಬಗ್ಗೆ ವರದಿಯಾಗಿದೆ.