ಪಾಕಿಸ್ತಾನದಲ್ಲಿ ನಾಯಿಗಳು ವಿಮಾನ ಏರುತ್ತವಾ?

ಇಸ್ಲಾಮಾಬಾದ್​: ಭದ್ರತಾ ಪಡೆಗಳ ಸರ್ಪಗಾವಲನ್ನೂ ಮೀರಿ ಇಲ್ಲಿನ ವಿಮಾನ ನಿಲ್ದಾಣದೊಳಗೆ ಬೀದಿನಾಯಿಗಳ ಹಿಂಡು ದಾಂಧಲೆ ನಡೆಸಿವೆ. ಇಸ್ಲಾಮಾಬಾದ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಬೀದಿನಾಯಿಗಳು ಪ್ರಯಾಣಿಕರೊಬ್ಬರನ್ನು ಹಿಂಬಾಲಿಸಿ ಬಂದಿವೆ. ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಕಂಡು ಬೊಗಳಿದ ನಾಯಿಗಳು ನಂತರ ನಿಲ್ದಾಣದಿಂದ ಹೊರ ನಡೆದಿವೆ. ಇದರಿಂದ ಕೋಪಗೊಂಡ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮ್ಯಾನೇಜರ್​ ಒಬ್ಬರನ್ನು ಕೆಲಸದಿಂದ ವಜಾ ಮಾಡಿದೆ. ಇಲ್ಲಿ ಅಚ್ಚರಿ ಪಡೋ ವಿಷಯ ಏನಂದ್ರೆ ವಿಮಾನ ನಿಲ್ದಾಣದ ಹೊರಗೆ ಟೈಟ್​ ಸೆಕ್ಯೂರಿಟಿ ಇದ್ದಾಗಿಯೂ ಬೀದಿ ನಾಯಿಗಳು ಒಳಗೆ ಹೇಗೆ ಬಂದವು ಅನ್ನೋದು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv