ನನಗೆ ಸಿಎಂ ಆಗೋಕೆ ಇನ್ನೂ ಏಜ್ ಇದೆ ಬಿಡ್ರಿ.. ಆದ್ರೆ ಈ ಬಾರಿ ಸರ್ಕಾರ ನಮ್ದೇ..!

ಬೆಂಗಳೂರು: 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ. 132 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಇದು ನಮ್ಮ ಸರ್ವೇ ರಿಪೋರ್ಟ್​ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. First News ಜೊತೆಗೆ Election Talk ನಡೆಸಿದ ಡಿ.ಕೆ.ಶಿವಕುಮಾರ್, 132 ಸ್ಥಾನಗಳಲ್ಲಿ ಕೈ ಮೇಲೇಳಲಿದ್ದು, ಈ ಬಾರಿಯೂ ಅಧಿಕಾರ ಮತ್ತೆ ಕಾಂಗ್ರೆಸ್ ಗೆ ಎಂದಿದ್ದಾರೆ. ಜೊತೆಗೆ ಮುಂದಿನ ಅವಧಿಯಲ್ಲೂ ಸಿದ್ಧರಾಮಯ್ಯರೇ ಸಿಎಂ ಆಗಲಿದ್ದು, ಅವರ ನೇತೃತ್ವದಲ್ಲೇ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಅವರು ಸ್ಫರ್ಧಿಸಿರುವ ಚಾಮುಂಡೇಶ್ವರಿಯಲ್ಲಿ 25 ಸಾವಿರ ಮತಗಳ ಅಂತರದಿಂದ ಜಯಗಳಿಸಲಿದ್ದು, ಬದಾಮಿ ರಿರ್ಪೋರ್ಟ್​ ಇನ್ನು ಬಂದಿಲ್ಲ . ಆದ್ರೆ ಎರಡು ಕ್ಷೇತ್ರದಲ್ಲೂ ಸಿಎಂ ಜಯಭೇರಿ ಬಾರಿಸುವುದು ಗ್ಯಾರೆಂಟಿ ಎಂದಿದ್ದಾರೆ. ಇಷ್ಟು ಮಾತ್ರವಲ್ಲದೇ ನಾನು ಸಿಎಂ ಆಗುವುದು, ಬಿಡುವುದು ಜನರಿಗೆ ಮತ್ತು ಹೈಕಮಾಂಡ್ ಗೆ ಬಿಟ್ಟಿರುವ ವಿಚಾರ. ನನಗೆ ಆತುರವಿಲ್ಲ ಎಂಬುದನ್ನು ಕೂಡ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಿಎಂ ಚೇರ್ ಅನ್ನೋದು ಅಂಗಡಿಯಲ್ಲಿ ಸಿಗೋವಂಥದ್ದು ಅಲ್ಲ ಅಂತಾ ಕೂಡ ಅವರು ಹೇಳಿದ್ದಾರೆ. Election Talk ನಲ್ಲಿ ಡಿ.ಕೆ.ಶಿವಕುಮಾರ್ ಏನೆಲ್ಲಾ ವಿಚಾರಗಳ ಬಗ್ಗೆ ಮಾತನ್ನಾಡಿದ್ರು? ನೀವೇ ನೋಡಿ..!

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv