ಆರ್​ಸಿಬಿ ಫ್ಯಾನ್ಸ್​​ಗೆ ಬ್ಯಾಡ್ ನ್ಯೂಸ್..! ಐಪಿಎಲ್​ನಿಂದ ಸ್ಟೇನ್ ಔಟ್..!

ಸತತ ಗೆಲವುಗಳಿಂದ ಗೆಲುವಿನ ಲಯಕ್ಕೆ ಮರಳಿರುವ ಆರ್​ಸಿಬಿಗೆ ದೊಡ್ಡ ಆಘಾತ ಎದುರಾಗಿದೆ.ತಂಡದ ಸ್ಟಾರ್ ಬೌಲರ್, ಮ್ಯಾಚ್​ ವಿನ್ನರ್ ಡೇಲ್ ಸ್ಟೇನ್ ಐಪಿಎಲ್​ನಿಂದ ರೂಲ್ಡ್ ಔಟ್ ಆಗಿದ್ದಾರೆ.ಭುಜದ ನೋವಿನಿಂದಾಗಿ ಐಪಿಎಲ್​ಗೆ ಗುಡ್​ ಬೈ ಹೇಳಿದ್ದಾರೆ.ಹ್ಯಾಟ್ರಿಕ್​ ಜಯದ ಮೂಲಕ ಪ್ಲೇ ಆಫ್​ ಕನಸು ಕಾಣುತ್ತಿರುವ ವಿರಾಟ್​ ಕೊಹ್ಲಿ ಪಡೆಗೆ,ಸ್ಟೇನ್ ಅಲಭ್ಯತೆ ಕಾಡಲಿದೆ.ಇಂಜ್ಯೂರಿ ಕಾರಣದಿಂದಾಗಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟೇನ್ ಆಡಿರಲಿಲ್ಲ.ಆರ್​ಸಿಬಿ ತಂಡಕ್ಕೆ ಸ್ಟೇನ್ ಬಂದಾಗಿನಿಂದ ಬೌಲಿಂಗ್ ವಿಭಾಗ ಸಾಕಷ್ಟು ಸುಧಾರಿಸಿತ್ತು.ಆಡಿದ ಎರಡು ಪಂದ್ಯಗಳಲ್ಲೇ ಸ್ಟೇನ್ ಅದ್ಭುತ ಪ್ರದರ್ಶ ನೀಡಿದ್ರು. ಪವರ್​ ಪ್ಲೇನಲ್ಲೇ ಇನ್​ಫಾರ್ಮ್ ಬ್ಯಾಟ್ಸ್​​​ಮನ್​ಗಳಿಗೆ ಖೆಡ್ಡಾ ತೋಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.