ಕೊಹ್ಲಿ ಕ್ರಿಕೆಟ್​ನಲ್ಲಿ ಶ್ರೇಷ್ಟ ತಂತ್ರಗಾರಿಗೆ ಹೊಂದಿದ್ದಾರೆ: ಸ್ಟೀವ್​ ವಾ

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟರ್‌ ಸ್ವೀವ್‌ ವಾ ಹಾಡಿಹೋಗಳಿದ್ದು, ಕೊಹ್ಲಿ ಕ್ರಿಕೆಟ್‌ನಲ್ಲಿ ಉತ್ತಮವಾದ ತಂತ್ರಗಾರಿಕೆಗಳನ್ನು ಹೊಂದಿದ್ದಾರೆ ಅಂತ ಹೇಳಿದ್ದಾರೆ. ಅಲ್ಲದೆ ಕೊಹ್ಲಿಯನ್ನು ಕ್ರಿಕೆಟ್‌ ದಿಗ್ಗಜರಾದ ಬ್ರಿಯನ್‌​ ಲಾರಾ ಮತ್ತು ವಿವಿಯನ್ ರಿಚರ್ಡ್ಸ್‌ಗೆ ಹೋಲಿಸಿದ್ದಾರೆ. ​ ಇಬ್ಬರು ದೊಡ್ಡ ಮಟ್ಟದ ಆಟಗಾರರು, ಕೊಹ್ಲಿಗೂ ಈ ದಿಗ್ಗಜರಿಗೂ ಸಾಮ್ಯತೆ ಇದೆ ಅಂತ ಹೇಳಿದ್ದಾರೆ. ಕೊಹ್ಲಿ ಎಲ್ಲಾ ಮಾದರಿಯಲ್ಲೂ ಉತ್ತಮವಾಗಿ ಆಡಬಲ್ಲ ಆಟಗಾರ, ವಿಶ್ವ ಕ್ರಿಕೆಟ್​ನಲ್ಲಿ ಅಚ್ಚರಿಯ ತಂತ್ರಗಾರಿಕೆ ಹೊಂದಿದ್ದಾರೆ. ಎ ಬಿ ಡಿ ವಿಲಿಯರ್ಸ್​ ಮತ್ತು ಕೊಹ್ಲಿ ಇಬ್ಬರು ಉತ್ತಮ ಚಾಣಾಕ್ಷ ಆಟಗಾರರು. ಡಿವಿಲಿಯರ್ಸ್​ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಕಾರಣ ಕೊಹ್ಲಿ ಟೆಸ್ಟ್​ನ ಅಸಾಧಾರಣ ಆಟಗಾರರಾಗಿದ್ದಾರೆ. ಈತ ಲಾರಾ, ತೆಂಡುಲ್ಕರ್​, ರಿಚರ್ಡ್​ರಂತೆ ದೊಡ್ಡ ಮಟ್ಟದ ಯಶಸ್ಸು ಗಳಿಸಲು ಇಚ್ಚಿಸುತ್ತಾನೆ. ಅವರೆಲ್ಲರು ಬಹುದೊಡ್ಡ ಅವಕಾಶದಲ್ಲಿ ಸಾಧನೆ ಮಾಡಿ ಕ್ರಿಕೆಟ್​ನ ದಂತ ಕಥೆಗಳಾಗಿದ್ದಾರೆ ಎಂದರು. ಇಂಗ್ಲೆಂಡ್​ ವಿರುದ್ದದ ಮೊದಲ ಟೆಸ್ಟ್​ ಪಂದ್ಯದಲ್ಲಿ ವಿರಾಟ್‌ 149 ಮತ್ತು 51 ರನ್​ಗಳಿಸಿ ಭಾರತದ ಪಾಲಿಗೆ ಅತಿ ಹೆಚ್ಚು ರನ್​ ಭಾರಿಸಿದ್ದರು. ಆ ಮೂಲಕ ಐಸಿಸಿ ಟೆಸ್ಟ್​ ಱಂಕಿಂಗ್‌ನಲ್ಲಿ ​ಮೊದಲ ಸ್ಥಾನಗಳಿಸಿದ ಏಳನೇ ಆಟಗಾರ ಏನಿಸಿಕೊಂಡಿದ್ದರು.