ಎಚ್ಚರ ಎಚ್ಚರ..! ನಿಫಾ ವೈರಸ್ ಬರ್ತಿದೆ ಎಚ್ಚರ..!

ನಿಫಾ ವೈರಸ್‌. ದೇವರನಾಡು ಕೇರಳದಲ್ಲಿ ಜನರನ್ನ ಬೆಚ್ಚಿಬೀಳಿಸಿರೋ ವೈರಸ್‌ ಇದು. ಈಗಾಗ್ಲೇ 9 ಮಂದಿಯನ್ನ ಬಲಿ ಪಡೆದಿದ್ದು, 25ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಅಂದ್ಹಾಗೆ 1998 ರಲ್ಲಿ ಮಲೇಷಿಯಾದ ಕಾಂಪುಂಗ್ ಸುಂಗಾತ್ ನಿಫಾ ಎಂಬ ಭಾಗದಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತು. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತೆ. ಆದ್ರೆ ಅವತ್ತಿನಿಂದ ಇವತ್ತಿನವರೆಗೂ ಈ ರೋಗಕ್ಕೆ ಔಷಧಿ ಕಂಡು ಹಿಡಿದಿಲ್ಲ. ಸೋ ಈ ವೈರಸ್ ಮಾರಣಾಂತಿಕ ವೈರಸ್ ಎಂದೇ ಕುಖ್ಯಾತಿ ಪಡೆದಿದೆ.

ನಿಫಾ ವೈರಸ್‌ ಹೇಗೆ ಹರಡುತ್ತೆ ಗೊತ್ತಾ..?
-ಬಾವಲಿಗಳಿಂದ ಹರಡುವ ರೋಗ ಈ ನಿಫಾ ವೈರಸ್ ಜ್ವರ
-ಬಾವಲಿಗಳು ಕಚ್ಚಿದ ಹಣ್ಣನ್ನ ತಿನ್ನೋದ್ರಿಂದ ಹರಡುತ್ತೆ
-ಈ ಹಣ್ಣನ್ನ ತಿಂದ್ರೆ ಇನ್ನುಳಿದ ಪ್ರಾಣಿಗಳಿಗೂ ಹರಡುತ್ತೆ ಜ್ವರ
-ಹಣ್ಣು ತಿಂದ ಪ್ರಾಣಿಗಳನ್ನ ತಿಂದ್ರೆ ರೋಗ ಬರೋದು ಗ್ಯಾರಂಟಿ

ಈ ನಿಫಾ ವೈರಸ್ ಈಗ ಕೇರಳದಲ್ಲಿ ಕಾಣಿಸಿಕೊಂಡಿದೆ. ಇದುವರೆಗೆ ಈ ಜ್ವರಕ್ಕೆ 10 ಜನರ ಪ್ರಾಣ ಪಕ್ಷಿ ಹಾರಿಹೋಗಿದೆ. ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮೂವರ ಸಾವಿಗೆ ನಿಫಾ ವೈರಸ್ ಕಾರಣ ಎಂದು ದೃಢಪಡಿಸಿದೆ. ಹೀಗಾಗಿ ಬರಿ ಕೇರಳದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳಲ್ಲೂ ಹರಡುವ ಎಲ್ಲಾ ಸಾಧ್ಯತೆಗಳಿದ್ದು ಕಟ್ಟೆಚ್ಚರ ಅತ್ಯಗತ್ಯ ಅಂತಿದ್ದಾರೆ ಕೇಂದ್ರ ಆರೋಗ್ಯ ಸಚಿವ ಜೆ .ಪಿ. ನಡ್ಡಾ.

ನಿಫಾ ಜ್ವರದ ಲಕ್ಷಣಗಳೇನು..?
-ಜ್ವರ, ತಲೆನೋವು, ವಾಂತಿ, ತಲೆ ಸುತ್ತುವಿಕೆ
-ಕೆಲವರಲ್ಲಿ ಅಪಸ್ಮಾರದ(ಎಪಿಲೆಪ್ಸಿ) ಲಕ್ಷಣಗಳು ಕಾಣುತ್ತವೆ
-ಈ ಲಕ್ಷಣಗಳು ಸಾಮಾನ್ಯವಾಗಿ 10 ರಿಂದ 12 ದಿನ ಕಾಣಿಸುತ್ತದೆ
-ಪ್ರಜ್ಞಾ ಹೀನರಾಗುತ್ತಾರೆ (ಅನ್‌ಕಾನ್ಶಿಯಸ್‌)
-ನಂತರ ಜ್ವರ ಮೆದುಳಿಗೆ ಹರಡುತ್ತದೆ.

ಹೀಗೆ ಮಾಡಿದ್ರೆ ನಿಫಾದಿಂದ ತಪ್ಪಿಸಿಕೊಳ್ಳಬಹುದು..!
-ಪ್ರಾಣಿಗಳು, ಪಕ್ಷಿಗಳು ಕಚ್ಚಿದ ಹಣ್ಣುಗಳನ್ನ ಸೇವಿಸಬೇಡಿ
– ಸೋಂಕು ಹರಡಿರುವ ರೋಗಿಯ ಜೊತೆ ಇದ್ದಾಗ ಶುಚಿತ್ವಕ್ಕೆ ಗಮನಕೊಡಿ
– ಚಿಕಿತ್ಸೆ ನೀಡುವಾಗ ಮಾಸ್ಕ್, ಗ್ಲೌಸ್, ಹೀಗೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು
– ಬಾವಲಿಗಳು ಹೆಚ್ಚಿರುವ ಸ್ಥಳಗಳಲ್ಲಿ ಶೇಖರಿಸಿದ ಪಾನೀಯಗಳನ್ನ ಕುಡಿಯಬಾರದು
-ಬಾವಲಿಗಳಿರುವ ಭಾಗಗಳಲ್ಲಿ ನೀರನ್ನು ಕುಡಿಯಬಾರದು.
– ಒಂದು ಲಕ್ಷಣ ಕಂಡುಬಂದ್ರೂ ಅವಶ್ಯಕವಾಗಿ ವೈದ್ಯರಿಗೆ ತೋರಿಸುವುದು
– ರಕ್ತ ಪರೀಕ್ಷೆಯನ್ನ ಅವಶ್ಯಕವಾಗಿ ಮಾಡಿಸುವುದು.

ವರದಿ -ಪವಿತ್ರ