ಈ ಬೇಸಿಗೆಯಲ್ಲಿ ತಂಪು ತಂಪು ಕೂಲ್​ ಕೂಲ್​ ಆಗಿರಿ

ಬೇಸಿಗೆಯಲ್ಲಿ ತಾಪಮಾನ ದಿನೇ ದಿನೇ ಹೆಚ್ಚಾಗ್ತಾ ಇದೆ. ತಂಪು ಪಾನೀಯಗಳಿಗೆ ಡಿಮ್ಯಾಂಡ್​ ಕೂಡಾ ಹೆಚ್ಚಾಗ್ತಾ ಇದೆ. ಬಿಸಿಲಿನ ಬೇಗೆಗೆ ನಾವು ಸೇವಿಸುವ ಕೆಲವು ಆಹಾರಗಳು ಕೂಡಾ ನಮ್ಮ ದೇಹದಲ್ಲಿ ಉಷ್ಣತೆ ಉಂಟು ಮಾಡುತ್ತದೆ.  ಬೇಸಿಗೆಯಲ್ಲಿ ನಮ್ಮ ದೇಹ ಹೆಚ್ಚು ಡಿ-ಹೈಡ್ರೆಟ್​ ಆಗೋದ್ರಿಂದ ನಮ್ಮ ದೇಹಕ್ಕೆ  ದ್ರವಾಹಾರಗಳ ಅಗತ್ಯ ಹೆಚ್ಚಾಗಿರುತ್ತೆ. ಇನ್ನು ತಂಪಾದ ಪಾನೀಯಗಳು ಅಂದ್ರೆ ಸಾಕು ನಾವು ನ್ಯಾಚುರಲ್​ ಆಗಿ ತಯಾರಿಸಿದ ಹಣ್ಣಿನ ಜ್ಯೂಸ್​ಗಳ ಬಗ್ಗೆ ನಾವು  ಹೆಚ್ಚಾಗಿ ಗಮನ ಕೊಡುವುದಿಲ್ಲ. ಬದಲಾಗಿ ಅಂಗಡಿಗಳಲ್ಲಿ ಸಿಗುವ ಜ್ಯೂಸ್​ಗಳನ್ನ ಕುಡಿಯುತ್ತೇವೆ. ಅದಕ್ಕೆ ಬದಲಾಗಿ ಮನೆಯಲ್ಲೆ ಕೆಲವು ವಿಶಿಷ್ಟ ಆಹಾರಗಳನ್ನ ಸೇವಿಸಿದ್ರೆ, ನಾವು ಸೇಫ್​ ಆಗಿರ್ತೀವಿ.ಇದಕ್ಕೆ ಬೆಸ್ಟ್​ ಸಲ್ಯೂಷನ್​ ಅಂದ್ರೆ ಥಂಡೈ..

1. ಬೇಸಿಗೆಯಲ್ಲಿ ತಂಪು ತಂಪು ಕೂಲ್​ ಆಗಿರಲು ಥಂಡೈ ಸೇವಿಸಿ, ಅರೇ ಏನಪ್ಪಾ ಇದು ಥಂಡೈ ಅಂತೀದ್ದೀರಾ.. ಈ ಥಂಡೈ ಒಂಥರಾ ಮಿರಾಕಲ್​ ಡ್ರಿಂಕ್​ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಈ ಒಂದು ಡ್ರಿಂಕ್​ ಬ್ಲಾಟಿಂಗ್​, ಅಸಿಡಿಟಿ, ಹೊಟ್ಟೆ ಉಬ್ಬುವಿಕೆಯನ್ನ ಕಡಿಮೆ ಮಾಡಿ ನಿಮಗೆ ರಿಲೀಫ್​ ನೀಡುತ್ತದೆ.

2. ಗಸೆಗಸೆ, ಏಲಕ್ಕಿ, ಮೆಣಸು, ಕೇಸರಿ, ಸೋಂಪು, ಬಾದಾಮಿ ಮತ್ತು ಪಿಸ್ತಾಗಳನ್ನ ಬಳಸಿ ಥಂಡೈ ಅನ್ನ ತಯಾರಿಸಲಾಗುತ್ತದೆ. ಜೊತೆಗೆ ಇದರಲ್ಲಿ ಹಾಲನ್ನ ಕೂಡಾ ಬೆರೆಸುವುದರಿಂದ ಈ ಎಲ್ಲಾ ಪದಾರ್ಥಗಳು ಸೇರಿ ಎನರ್ಜೈಸರ್ ಆಗಿ ಕಾರ್ಯನಿರ್ವಹಿಸುತ್ತವೆ. ಇದು ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನ ಒದಗಿಸಿ, ಉಷ್ಣವನ್ನ ನಿಯಂತ್ರಿಸಿ ನಿಮ್ಮ ದೇಹ ಡಿ ಹೈಡ್ರೇಟ್​ ಆಗದಂತೆ ಸಹಾಯ ಮಾಡುತ್ತದೆ. ಇನ್ನು ಈ ಮಿರಾಕಲ್​ ಡ್ರಿಂಕ್​ ಹಾರ್ಮೋನ್​ಗಳನ್ನ ಸಮತೋಲನದಲ್ಲಿಡುತ್ತದೆ.

2. ದೇಹದ ಉಷ್ಣತೆಯನ್ನ ಕಡಿಮೆ ಮಾಡುತ್ತದೆ: ಬೇಸಿಗೆಯಲ್ಲಿ ಇದು ಸಾಮಾನ್ಯವಾದ ಸಮಸ್ಯೆ, ಹೊರಗಿನ ಬಿಸಿಲು, ನಾನ್​ವೆಜ್​ಗಳ ಬಳಕೆ ಹೆಚ್ಚಾದರೆ ಈ ಸಮಸ್ಯೆ ನಮ್ಮನ್ನ ಕಾಡುತ್ತದೆ. ಇಂತಹ ಸಮಯದಲ್ಲಿ ಥಂಡೈ ಸೇವಿಸಿದ್ರೆ, ದೇಹದ ಉಷ್ಣತೆ ಕಡಿಮೆಯಾಗುತ್ತದೆ.

3. ಬೇಸಿಗೆ ಕಾಲದಲ್ಲಿ ಅಸಿಡಿಟಿ, ಮತ್ತು ಹೊಟ್ಟೆ ಉಬ್ಬುವುದು ಸಾಮಾನ್ಯವಾಗಿ ಹೆಚ್ಚಾಗಿ ಕಂಡು ಬರುವ ಸಮಸ್ಯೆ. ಈ ರೀತಿಯ ಸಮಸ್ಯೆ ಇದ್ದವರು ಥಂಡೈ ಸೇವಿಸುವುದರಿಂದ ಪರಿಹಾರ ಪಡೆದುಕೊಳ್ಳಬಹುದು. ಜೊತೆಗೆ ಇದು ಗಟ್​ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡಿ ಕರುಳಿನ ಆರೋಗ್ಯವನ್ನ ಸುಧಾರಿಸುತ್ತದೆ.

4. ಥಂಡೈ ಸೇವನೆ ನಿಮಗೆ ರಿಫ್ರೇಶಿಂಗ್​ ಅನುಭವವನ್ನ ನೀಡುತ್ತದೆ. ಇದು ಕೇಕ್ ಮೇಲಿರುವ ಐಸ್​ ರೀತಿ ಇದ್ದು, ನೈಸರ್ಗಿಕವಾಗಿ ಬಾಯಾರಿಕೆಯನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಪ್ಯಾಕೇಜ್ಡ್​ ಜ್ಯೂಸ್​ಗಳು ನಿಮ್ಮ ದೇಹದಲ್ಲಿರುವ ಎಲೆಕ್ಟ್ರೋಲೈಟ್​ ಬ್ಯಾಲೆನ್ಸ್​ ಕಡಿಮೆ ಮಾಡುತ್ತದೆ.

ಇನ್ನು ಇದರ ಜೊತೆ, ಎಳನೀರು, ನಿಂಬೆ ಹಣ್ಣಿನ ಜ್ಯೂಸ್​, ಗುಲ್ಕಂದ್​, ಮಜ್ಜಿಗೆ, ಕಬ್ಬಿನ ಜ್ಯೂಸ್​, ಮನೆಯಲ್ಲೇ ತಯಾರಿಸಿದ ಶರಬತ್ತುಗಳನ್ನ ಸೇವಿಸಿದ್ರೆ ಬ್ಲಾಟಿಂಗ್​ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಯಾಕಂದ್ರೆ, ಈ ಎಲ್ಲಾ ಜ್ಯೂಸ್​ಗಳಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹ, ಬೊಜ್ಜು ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಒಳಗಾಗದೇ ಆರೋಗ್ಯವಾಗಿರಬಹುದು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv