5 ಲಕ್ಷ ಮನೆಗಳ ನಿರ್ಮಾಣ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಯೋಜನೆಯನ್ನ ರಾಜ್ಯದ ಜನತೆ, ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ರಾಜ್ಯ ಸರ್ಕಾರ 5 ಲಕ್ಷ ಮನೆಗಳ ಯೋಜನೆ ಹಮ್ಮಿಕೊಂಡಿದೆ ಎಂದು ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಂ ಮಾತನಾಡಿದ್ರು. ಜಾಗದ ಲಭ್ಯತೆ ಬಗ್ಗೆ ಜಿಲ್ಲಾಧಿಕಾರಿಗಳು ಗಮನವಹಿಸಿ, ಅವಶ್ಯಕತೆ ಇದ್ದಲ್ಲಿ ಭೂಮಿ ಖರೀದಿಸೋಣ. ಉದ್ಯೋಗ ಸೃಷ್ಟಿ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಕೇಂದ್ರದಿಂದ ಪ್ರತಿ ಜಿಲ್ಲೆಗೆ ಬರುವ ₹ 50 ಲಕ್ಷವನ್ನು ಸರಿಯಾಗಿ ಬಳಸಿಕೊಳ್ಳಿ. ನನಗಿಂತ ನಿಮಗೆ ಹೆಚ್ಚು ಅನುಭವ ಇದೆ. ನಿಮ್ಮ ಅನುಭವದ ಆಧಾರದ ಮೇಲೆ ಸಲಹೆ ಸೂಚನೆ ಕೊಡಿ. ನಾನು ಮುಖ್ಯಮಂತ್ರಿಯಾಗಿ ನಿಮ್ಮ ಮೇಲೆ ಸವಾರಿ ಮಾಡಲು ಬಂದಿಲ್ಲ ಅಂತಾ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ಹೆಸರಿಗೆ ಮಾತ್ರ ಸಮ್ಮಿಶ್ರ ಸರ್ಕಾರ, ನಮ್ಮೆಲ್ಲರದು ಒಂದೇ ಗುರಿ
ನಮ್ಮದು ಹೆಸರಿಗೆ ಮಾತ್ರ ಸಮ್ಮಿಶ್ರ ಸರ್ಕಾರ, ನಮ್ಮೆಲ್ಲರದು ಒಂದೇ ಗುರಿಯಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ ಹಾಗೂ ಸಿಎಂ ಕುಮಾರಸ್ವಾಮಿ ಹೇಳಿದ್ರು. ರೈತರ ಪರವಾಗಿ ನಮ್ಮ ಸರ್ಕಾರ ಇದೆ. ಹಿಂದಿನಿಂದಲೂ ನಮ್ಮ ಸರ್ಕಾರ ರೈತರ ಪರವಾಗಿ ಇದೆ. ಮುಂದಿನ ದಿನಗಳಲ್ಲಿ ಹವಾಮಾನ ನಮ್ಮ ಪರವಾಗಿ ಇರುತ್ತದೆ ಅಂತ ಅನ್ನಿಸೋಲ್ಲ. ಮುಂದೆ ಹೆಚ್ಚು ಮಳೆಯಾಗುವ ಸೂಚನೆ ಇದೆ. ಮಳೆ ಜೊತೆಗೆ ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದ ಸಮಸ್ಯೆ ಎದುರಾದ್ರೆ ಅವುಗಳನ್ನು ಎದುರಿಸಲು ನೀವುಗಳು ತಯಾರಾಗಿ. ಪ್ರಕೃತಿ ವಿಕೋಪಗಳು ಎದುರಾದಾಗ ಸಮರ್ಪಕವಾಗಿ ಎದುರಿಸಲು ಯಾವ ಜಿಲ್ಲೆಯಲ್ಲೂ ಸಮರ್ಪಕವಾದ ವ್ಯವಸ್ಥೆ ಇಲ್ಲ, ಇದನ್ನ ನಾವು ತರಬೇಕಿದೆ. ಕೆಳಮಟ್ಟದಲ್ಲಿ ಜನರ ಸಮಸ್ಯೆ ಬಗೆಹರಿಯದೇ ಇದ್ದಾಗ, ಜನರು ಜನತಾ ದರ್ಶನಕ್ಕೆ ಬಂದು ಸಿಎಂ ಮುಂದೆ ಮಂತ್ರಿಗಳ ಮನೆ ಮುಂದೆ ಬರುತ್ತಾರೆ. ಕೆಳಮಟ್ಟದ ಅಧಿಕಾರಿಗಳು ಆದಷ್ಟೂ ಜನರ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸ್ಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ರು. ಸಭೆಯಲ್ಲಿ ಕೃಷ್ಣ ಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಸೇರಿದಂತೆ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv