SC-ST ನೌಕರರ ಹಿಂಬಡ್ತಿ‌ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಎಸ್‌ಸಿ ಎಸ್‌ಟಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸುಪ್ರೀಂಕೋರ್ಟ್ ಮೇ.10ರಂದು ಶಾಸನ‌ಸಭೆಯ ವಿಧೇಯಕವನ್ನ ಮಾನ್ಯ ಮಾಡಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ನೌಕರರ ಹಿಂಬಡ್ತಿ‌ಯನ್ನು ರದ್ದುಗೊಳಿಸಿ ಆದೇಶಿಸಿದೆ.

ಸುಪ್ರೀಂಕೋರ್ಟ್, 2019 ಫೆಬ್ರವರಿ 27ರ ಆದೇಶದಂತೆ ಮುಂಬಡ್ತಿ ಪಟ್ಟಿ‌ ಸಿದ್ಧಪಡಿಸಿ, ವಿಧೇಯಕದ ಅನ್ವಯ ತತ್ಪರಿಣಾಮವಾಗಿ ಜೇಷ್ಠತೆ ವಿಸ್ತರಿಸುವಂತೆ ಸೂಚನೆ ನೀಡಿತ್ತು. ಅದರಂತೆ ಈಗ ಎಲ್ಲಾ ಎಸ್‌ಸಿ, ಎಸ್‌ಟಿ ನೌಕರರ ಹಿಂಬಡ್ತಿಯನ್ನು ಸರ್ಕಾರ ರದ್ದು ಮಾಡಿದೆ. ಅಲ್ಲದೇ, 30 ದಿನಗಳಲ್ಲಿ  ನೌಕರರ ಮೊದಲಿನ ಸೇವಾ ಜೇಷ್ಠತೆ ವಿಸ್ತರಿಸಲು ಆದೇಶಿಸಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv