ಎಸ್​ಎಸ್​ಎಲ್​ಸಿ ಫೇಲ್ ಆದರೂ ಪಿಯುಸಿಗೆ ಪ್ರವೇಶ ..!

ಬಳ್ಳಾರಿ: ಹಣ ಪಡೆದು ಕಾಲೇಜಿನಲ್ಲಿ ನಕಲಿ ಪ್ರವೇಶಾತಿ ನೀಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ನಗರದ ಕಪ್ಪಗಲ್ ರಸ್ತೆಯಲ್ಲಿರುವ ಸತ್ಯಂ ಪಿಯು ಕಾಲೇಜಿನಲ್ಲಿ ಅಕ್ರಮ ನಡೆದಿದೆ. ಎಸ್​ಎಸ್​ಎಲ್​ಸಿ ಫೇಲ್ ಆದ ಕೆಲ ವಿದ್ಯಾರ್ಥಿಗಳಿಗೂ ಪಿಯುಸಿ ಪ್ರವೇಶಾತಿ ನೀಡಿದ್ದು ದಾಖಲೆ ಸಮೇತ ಬಹಿರಂಗವಾಗಿದೆ ಅಂತಾ ಎಸ್ಎಫ್ಐ ಕಾರ್ಯಕರ್ತರು ಆರೋಪಿಸಿದ್ದಾರೆ. ಇನ್ನು ಕಾಲೇಜಿನ ನಕಲಿ ಪ್ರವೇಶಾತಿ ನೀಡುವುದನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ಹೊರ ಹಾಕಿದ್ರು. ಇದೇ ವೇಳೆ ಪಿಯು ಮಂಡಳಿ ಕಾಲೇಜಿನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv