ಕೆಜಿಎಫ್ ಪ್ರೀ ರಿಲೀಸ್‌ ಫಂಕ್ಷನ್‌ಗೆ ರಾಜಮೌಳಿ ಚೀಫ್​ ಗೆಸ್ಟ್​​..!

ಕೆಜಿಎಫ್​ ಸಿನಿಮಾದ ಬಿಡುಗಡೆಗೆ ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ದಿನವೂ ಕೆಜಿಎಫ್​ ಫೀವರ್ ಜಾಸ್ತಿಯಾಗ್ತಿದೆ. ಕೇವಲ ಶ್ರೀ ಸಾಮಾನ್ಯನಲ್ಲ ಸ್ಟಾರ್ ಸೆಲೆಬ್ರಿಟಿಗಳೂ ಸಿನಿಮಾ ಕಣ್ತುಂಬಿಕೊಳ್ಳಲು ಎದುರು ನೋಡ್ತಿದ್ದಾರೆ. ಅಂದ್ಹಾಗೆ ಸ್ಟಾರ್ ನಟರು, ನಿರ್ದೇಶಕರೂ ‘ಚಿನ್ನದಂತ ಕೆಜಿಎಫ್​’ಗೆ ಜೈ ಅಂದಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಜಮೌಳಿ ಅಧಿಕೃತವಾಗಿ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ.
ಹೈದ್ರಾಬಾದ್​ನಲ್ಲಿ ಪ್ರೀ ರಿಲೀಸಿಂಗ್ ಈವೆಂಟ್​..!
ಕೆಜಿಎಫ್​ ಸಿನಿಮಾ ಟ್ರೈಲರ್ ನೋಡಿ ರಾಜಮೌಳಿ ಮೆಚ್ಚುಗೆಯ ಮಾತನ್ನಾಡಿದ್ದರು. ಈ ಪಿರಿಯಾಡಿಕ್​ ಸಿನಿಮಾ ನೋಡಲು ಕಾತರಿಸುತ್ತಿದ್ದೇನೆ ಅಂತಾ ಹೇಳಿದ್ದರು. ಇದೀಗ ಸ್ಟಾರ್​ ನಟ- ಸ್ಟಾರ್​ ಡೈರೆಕ್ಟರ್​ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಂದರ್ಭ ಬಂದಿದೆ. ಇದೇ ಭಾನುವಾರ ಹೈದ್ರಾಬಾದ್​​ನಲ್ಲಿ ಪ್ರೀ ರಿಲೀಸಿಂಗ್ ಈವೆಂಟ್​ ನಡೀತಿದೆ. ಈ ಸಮಾರಂಭದಲ್ಲಿ ರಾಜಮೌಳಿ ಮುಖ್ಯ ಅತಿಥಿಯಾಗಿ ಭಾಗವಹಿಸ್ತಿದ್ದು, ಕೆಜಿಎಫ್ ಟೀಂಗೆ ಆಲ್​ ದಿ ಬೆಸ್ಟ್​ ಹೇಳಲಿದ್ದಾರೆ. ಇತ್ತೀಚೆಗೆ ರಾಜಮೌಳಿ ಸಿನಿಮಾದಲ್ಲಿ ಯಶ್ ನಟಿಸ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಈ ಪ್ರಶ್ನೆಗಳಿಗೂ ಇದೇ ವೇದಿಕೆಯಲ್ಲಿ ಉತ್ತರವೂ ಸಿಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv