‘ಸಾಲಮನ್ನಾ ಆಗೋ ತನಕ ಸದನದ ಒಳಗೂ, ಹೊರಗೂ ಪ್ರತಿಭಟಿಸುತ್ತೇವೆ’

ಯಾದಗಿರಿ: ನೀವು ಎಲ್ಲಿಯತನಕ ರೈತರ ಸಾಲ ಮನ್ನಾ ಮಾಡುವುದಿಲ್ಲವೋ ಅಲ್ಲಿಯವರಿಗೂ ನಾವು ಸದನದ ಒಳಗೂ ಮತ್ತು ಹೊರಗೂ ಪ್ರತಿಭಟಿಸುತ್ತೇವೆ ಅಂತ ಶಾಸಕ ಶ್ರೀರಾಮುಲು ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಬಿ. ಶ್ರೀನಿವಾಸ್ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ರಾಮುಲು, ನಾನು ಮುಖ್ಯಮಂತ್ರಿಯಾಗಿ 24 ಘಂಟೆಯೊಳಗೆ ರೈತರ ಸಾಲ ಮನ್ನಾ ಮಾಡ್ತೀನಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಇವತ್ತು ಯೂ ಟರ್ನ್ ಹೊಡೆಯುತ್ತಿದ್ದಾರೆ ಅಂತಾ ಟೀಕಿಸಿದ್ರು. ಇನ್ನೂ ಈ ಸಂಬಂಧ ನಾಳೆ ಹೋರಾಟ ಮಾಡುತ್ತೇವೆ, ಬಂಧನ ಮಾಡಿದ್ರೂ ಹೆದರುವುದಿಲ್ಲ ಅಂತ ಎಚ್ಚರಿಕೆ ನೀಡಿದ್ರು. ಮೇಲಾಗಿ ಬಿಜೆಪಿ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ ರೈತರ ಪರವಾಗಿ ಹೋರಾಟ ಮಾಡುತ್ತಿದೆ ಎಂದ ರಾಮುಲು, ನಾಳೆ ರಾಜ್ಯದ ಹಲವು, ರೈತ ಸಂಘಟನೆ, ಕನ್ನಡಪರ ಸಂಘಗಳು & ಸಾರ್ವಜನಿಕರು ಬಿಜೆಪಿ ನೀಡಿದ ಬಂದ್ ಕರೆಗೆ ಬೆಂಬಲಿಸುತ್ತಿದ್ದಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ರು. ಅದೇ ರೀತಿ ಕುಮಾರಸ್ವಾಮಿಯವರು ಕೊಡ ರೈತರಿಗೆ ಕೊಟ್ಟಂತಹ ಮಾತನ್ನು ಉಳಿಸಿಕೊಳ್ಳಬೇಕು ಅಂತಾ ಗುಡುಗಿದ್ರು. ಇನ್ನು ಈ ಸಮ್ಮಿಶ್ರ ಸರ್ಕಾರವನ್ನು ಅವರಷ್ಟಕ್ಕೆ ಅವರೇ ನಿರ್ಣಾಮಗೊಳಿಸ್ಕೊತಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗ್ತಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv