ಸಿದ್ದರಾಮಯ್ಯ, ಜಿಟಿ ದೇವೇಗೌಡರ ಗುದ್ದಾಟ ನಿಂತಿಲ್ಲ: ಶ್ರೀರಾಮುಲು

ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ನಾಯಕರು ಒಂದಾದ್ರೂ ಉಭಯ ಪಕ್ಷದ ಕಾರ್ಯಕರ್ತರು ಹೊಡೆದಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡರ ಗುದ್ದಾಟ ಇನ್ನೂ ನಿಂತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೋದಿಯವರ ಆಡಳಿತದಲ್ಲಿ ಭಾರತ ಹೆಚ್ಚಾಗಿ ಉನ್ನತ ಮಟ್ಟಕ್ಕೆ ಹೋಗಿದೆ. ಮೈತ್ರಿ ಪಕ್ಷದ ಅಭ್ಯರ್ಥಿಗಳ ನಡುವೆ ಎಲ್ಲವು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಸಿದ್ದರಾಮಯ್ಯನವರನ್ನು ಕಡೆಗಣಿಸಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.

ಇವತ್ತು ಮೊದನೇ ಹಂತದ ಮತದಾನ ನಡೆಯುತ್ತಿದೆ. ಎಲ್ಲ ಭಾಗದಿಂದ ಉತ್ತಮ ಸ್ಪಂದನೆ ಕಂಡು ಬರುತ್ತಿದೆ. ದೇಶದಲ್ಲಿ ಬದಲಾವಣೆ ಪರ್ವ ಕಾಣಿಸುತ್ತಿದೆ. ರಾಜ್ಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ರಾಜ್ಯದಲ್ಲಿ 24 ಸೀಟ್ ಗೆಲ್ಲುವ ವಿಶ್ವಾಸವಿದೆ. ಸದ್ಯದ ಪರಿಸ್ಥಿತಿ ನೋಡಿದರೆ, ಮೈತ್ರಿ ಸರ್ಕಾರ ಮುಂದೆ ಇರುವುದು ಅನುಮಾನ. ದೇಶದಲ್ಲಿ 300ಕ್ಕೆ ಹೆಚ್ಚು ಸ್ಥಾನವನ್ನು ಗೆಲ್ಲುತ್ತೆೇವೆ. ಈಗಾಗಲೇ ನಮ್ನ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಪರ ಪಕ್ಷದ ನಾಯಕರ ಪ್ರಚಾರ ನಡೆಸಿದ್ದೇವೆ. ಒಟ್ಟಾಗಿ ನಾವು ಪ್ರಚಾರ ಮಾಡುತ್ತಿದ್ದೇವೆ. ಕಳೆದ ಬಾರಿ ಬಳ್ಳಾರಿಯನ್ನು ಕಳೆದುಕೊಂಡಿದ್ದೇವೆ. ಆದರೆ ಈ ಬಾರಿ ನಮ್ಮ ಅಭ್ಯರ್ಥಿ ಅಲ್ಲಿ ಗೆಲ್ಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬೆಳಗಾವಿ, ಧಾರವಾಡ ಸೇರಿ ಹಲವು ಜಿಲ್ಲೆಗಳ ಸೇರಿ ಬಹುತೇಕ ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಶ್ರೀರಾಮುಲು ಹೇಳಿದರು.

ಮುಖ್ಯಮಂತ್ರಿಗಳು ಐದು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ಇದ್ದ ಎಲ್ಲ‌ ಅನುದಾನವನ್ನು ಆ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಆ ಯೋಜನೆಗಳಿಂದ ಬಂದ ಕಮಿಷನ್ ಹಣದಿಂದ ಅಲ್ಲಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಬಂದಂತಹ ಕಮೀಷನ್ ಹಣವನ್ನು ಬಳಕೆ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ ಐಟಿ ದಾಳಿಗಳೇ ಸಾಕ್ಷಿ. ಯಾಕೆ ಆ ಭಾಗದಲ್ಲಿ ಮಾತ್ರ ಐಟಿ ದಾಳಿ ಆಗುತ್ತಿದೆ? ಮುಖ್ಯಮಂತ್ರಿ ಹಾಗೂ ರೇವಣ್ಣನವರು ಯೋಜನೆಗಳನ್ನು ಆರಂಭಿಸದೆ ಬಿಲ್‌ಗಳು ತೆಗೆದಿದ್ದಾರೆ. ಗುತ್ತಿಗೆದಾರರ ಮೂಲಕ ಕಮೀಷನ್ ಹಣ ಪಡೆದುಕೊಳ್ಳಲಾಗಿದೆ ಎಂದು ಶಾಸಕ ಶ್ರೀರಾಮುಲು ಆರೋಪಿಸಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv