‘ಡಿ.ಕೆ ಶಿವಕುಮಾರ್​ರ​ ಧಮ್ಕಿ ರಾಜಕಾರಣ ಉತ್ತರ ಕರ್ನಾಟಕದಲ್ಲಿ ನಡೆಯಲ್ಲ’

ಚಿತ್ರದುರ್ಗ: ಸಚಿವ ಡಿ.ಕೆ ಶಿವಕುಮಾರ್​ ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ ಅಂತಾ ಮೊಳಕಾಲ್ಮೂರು ಶಾಸಕ ಶ್ರೀ ರಾಮುಲು ಆರೋಪಿಸಿದ್ದಾರೆ. ಜಿಲ್ಲೆಯ ಹಾನಗಲ್​ನಲ್ಲಿ ಮಾತನಾಡಿದ ಅವರು, ಹಿಂದೆ ರಾಮನಗರ, ಸಾತನೂರಲ್ಲಿ ದಮ್ಕಿ ರಾಜಕಾರಣ ನಡೆಯುತ್ತಿತ್ತು. ಆದ್ರೆ ಇದೀಗ ಧಮ್ಕಿ ಸಂಪ್ರದಾಯವನ್ನು ಶಿವಕುಮಾರ್​ ಉತ್ತರ ಕರ್ನಾಟಕಕ್ಕೆ ತಂದಿದ್ದಾರೆ. ಆದ್ರೆ ಈ ಭಾಗದಲ್ಲಿ ಅವರ ಧಮ್ಕಿ ನಡೆಯೊಲ್ಲ. ನಿಮ್ಮಂತೆಯೇ ನಮಗೂ ಧಮ್ಕಿ ಹಾಕಲು ಬರುತ್ತೆ. ಆದ್ರೆ ಇದನ್ನ ಮುಂದುವರೆಸುವುದು ಬೇಡ ಅಂತಾ ಹೇಳಿದ್ರು.

ಇದೇ ವೇಳೆ, ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ವಿಚಾರವಾಗಿ ಮಾತನಾಡಿದ ಶ್ರೀರಾಮುಲು, ರಮೇಶ್​​ ಕಾಂಗ್ರೆಸ್​ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಅವರೊಂದಿಗೆ ಕೆಲವು ಶಾಸಕರಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ಜೊತೆಗೆ ರಮೇಶ್ ಜಾರಕಿಹೊಳಿ ನಿಕರ ಸಂಪರ್ಕ ಹೊಂದಿದ್ದಾರೆ. ಅವರನ್ನ ನಮ್ಮ ಪಕ್ಷಕ್ಕೆ ಕರೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಅಂತಾ ತಿಳಿಸಿದ್ರು. ಸಿಎಂ ಆದ ಬಳಿಕ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕವನ್ನು ಸಂಪೂರ್ಣವಾಗಿ ಮರೆತಿದ್ದ ಹೆಚ್​.ಡಿ ಕುಮಾರಸ್ವಾಮಿ ನಿನ್ನೆ ಕುಂದಗೋಳಕ್ಕೆ ಬಂದಿದ್ರು. ಆದ್ರೆ, ಇಲ್ಲಿ ಅವರು ಕಾಮಗಾರಿಗಳ ಕುರಿತು ಒದ್ದಾಡುತ್ತಿದ್ದಾರೆಯೇ ಹೊರತು, ಬರದ ಕುರಿತು ಚಕಾರ ಎತ್ತುತ್ತಿಲ್ಲ ಅಂತಾ ಆರೋಪಿಸಿದರು.

‘ಸರ್ಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’
ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಪಕ್ಷೇತರರ ಜೊತೆ ಸೇರಿ ಸರ್ಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಅಂತಾ ಶ್ರೀರಾಮಲು ಹೇಳಿದ್ರು. ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಇದೆ. ಹೀಗಾಗಿ ಅವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಬಾದಾಮಿಯಲ್ಲಿ ಕೇವಲ 1,600 ಮತಗಳಿಂದ ಗೆದ್ದ ಸಿದ್ದರಾಮಯ್ಯ ಬಾಯಿ ಬಡಕ ಮನುಷ್ಯ. ಅವರಿಗೆ ಮಾತನಾಡಲು ಬರುತ್ತೆ ಅಂತ ಮಾತ್ನಾಡ್ತಾರೆ ಅಂತಾ ಶ್ರೀರಾಮುಲು ವಾಗ್ದಾಳಿ ನಡೆಸಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv