‘ಕೆಜಿಎಫ್’​ ಚಿತ್ರೀಕರಣಕ್ಕೂ ಮೊದಲೇ ಶ್ರೀನಿಧಿ ಕೈಗೆ ಪೆಟ್ಟು..!

‘ಕೆಜಿಎಫ್​’ ಭಾರತೀಯ ಸಿನಿಮಾ ಇತಿಹಾಸದಲ್ಲಿ ನೆನಪಿನಲ್ಲಿಡೋ ಸಿನಿಮಾ. ನಿರೀಕ್ಷೆಗೂ ಮೀರಿ ಸಿನಿಮಾನ ಮೆಚ್ಚಿ, ಅಪ್ಪಿಕೊಂಡರು. ಇದೀಗ ಕೆಜಿಎಫ್​ ಮುಂದುವರೆದ ಭಾಗ ಆರಂಭವಾಗುತ್ತಿದ್ದು, ಏಪ್ರಿಲ್ ಮೊದಲ ವಾರದಿಂದಲೇ ಸಿನಿಮಾ ಕೆಲಸ ಸಾಗುತ್ತಿದೆ. ಇದರ ಮಧ್ಯೆ ‘ಕೆಜಿಎಫ್​’ ನಾಯಕಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡು ಸುದ್ದಿಯಾಗಿದ್ದಾರೆ.
ರೀನಾಗೆ ಏನಾಯ್ತು..?
ಕೆಜಿಎಫ್​ ಸಿನಿಮಾದ ಪ್ರತಿ ಪಾತ್ರವೂ ಜನಮಾನಸದಲ್ಲಿ ಉಳಿದು ಬಿಟ್ಟಿವೆ. ಅದ್ರಲ್ಲೂ ರೀನಾ ಪಾತ್ರದಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ಮೆಚ್ಚುಗೆ ಗಳಿಸಿದ್ದರು. ಚಾಪ್ಟರ್​-2 ಕಥೆಯಲ್ಲೂ ಶ್ರೀನಿಧಿ ಪ್ರಾಮುಖ್ಯತೆ ಹೆಚ್ಚಿದ್ದು, ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಶ್ರೀನಿಧಿಯ ಫೋಟೊವೊಂದು ಸುದ್ದಿಯಾಗಿದೆ. ಹಸು- ಕುರಿಯ ಜೊತೆಗಿರುವ ಫೋಟೊನಾ ಹಂಚಿಕೊಂಡಿದ್ದರು. ಅದ್ರಲ್ಲಿ ಅವರ ಕೈಗೆ ಪೆಟ್ಟು ಬಿದ್ದಿರೋದನ್ನು ಗಮನಿಸಬಹುದು. ಚಾಪ್ಟರ್​-2 ಚಿತ್ರೀಕರಣಕ್ಕೂ ಮೊದಲೇ ಕೈಗೆ ಪೆಟ್ಟು ಆಗಿರೋದ್ರಿಂದ, ಅಭಿಮಾನಿಗಳು ಕೈಗೆ ಏನಾಯ್ತು..? ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಿನ ತಿಂಗಳು ಶೂಟಿಂಗ್​ ಆರಂಭವಾಗಲಿದ್ದು, ಅಷ್ಟರಲ್ಲಿ ಶ್ರೀನಿಧಿ ಗುಣಮುಖರಾಗುತ್ತಾರಾ..? ಅನ್ನೋ ಸಂದೇಹವೂ ಕಾಡುತ್ತಿದೆ. ಮತ್ತೊಂದೆಡೆ ಚಿತ್ರತಂಡ ಸರ್ವ ಸಿದ್ಧತೆಯೊಂದಿಗೆ ಅಖಾಡಕ್ಕೆ ಇಳಿಯೋಕೆ ಸಜ್ಜಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv