ಕವಲುದಾರಿಗೆ ‘ರೋರಿಂಗ್ ಸ್ಟಾರ್’ ಶುಭಹಾರೈಕೆ

ಪವರ್​ ಸ್ಟಾರ್ ಪುನೀತ್​ರಾಜ್ ಕುಮಾರ್ ಅವರ ಪಿಆರ್​ಕೆ ಬ್ಯಾನರ್ ಅಡಿ ಚೊಚ್ಚಲ ಸಿನಿಮಾವಾಗಿ ಕವಲುದಾರಿ ನಾಳೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಅನಂತ್​ನಾಗ್ ಹಾಗೂ ರಿಷಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಚಿತ್ರ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದಲೇ ಭರ್ಜರಿ ಸೌಂಡ್ ಮಾಡಿತ್ತು. ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ಹೇಮಂತ್​ರಾವ್​ ಕವಲುದಾರಿಗೆ ಆ್ಯಕ್ಷನ್​ ಕಟ್​ ಹೇಳಿದ್ದು ತುಂಬಾನೇ ನಿರೀಕ್ಷೆ ಮೂಡಿಸಿದೆ.

ಅಪ್ಪು ಸಿನಿಮಾಗೆ ಶ್ರೀಮುರಳಿ ಸಾಥ್..!
ಪಿಆರ್​ಕೆ ಬ್ಯಾನರ್​ನ ಚೊಚ್ಚಲ ಸಿನಿಮಾಗೆ ಸಾಕಷ್ಟು ತಾರೆಯರು ಶುಭಹಾರೈಸಿದ್ರು. ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಟ್ವಿಟರ್ ಮೂಲಕ ಶುಭಕೋರಿದ್ದಾರೆ. ಏಪ್ರಿಲ್ 12ರಂದು ತೆರೆಕಾಣ್ತಾಯಿರೋ ಈ ಚಿತ್ರ ಪುನೀತ್‌ ರಾಜ್‌ಕುಮಾರ್ ಅವರ ಫಸ್ಟ್ ವೆಂಚರ್ ಸಿನಿಮಾ ಆಗಿದೆ. ಸಾಕಷ್ಟು ನಿರೀಕ್ಷೆ ಹೊಂದಿರೋ ಚಿತ್ರತಂಡಕ್ಕೆ ಶುಭವಾಗಲಿ ಅಂತಾ ಹಾರೈಸಿದ್ದಾರೆ.

ಇನ್ನು ಈ ಚಿತ್ರ ಸತ್ಯ ಮತ್ತು ಸುಳ್ಳಿನ ನಡುವೆ ನಡೆಯೋ ಕಥಾಹಂದರವನ್ನು ಹೊಂದಿದೆ. ಅಲ್ಲದೇ ಇತ್ತೀಚಿನ ಕೆಲವು ಕ್ರಿಮಿನಲ್ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳನ್ನು ಹೇಗೆಲ್ಲಾ ಶೋಷಣೆ ಮಾಡಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಾರೆ ಅನ್ನೋ ಸಂದೇಶ ಹೊತ್ತು ತಂದಿದೆ. ಚಿತ್ರದಲ್ಲಿ ರಿಷಿ ಟ್ರಾಫಿಕ್ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದು ನಾಯಕಿಯಾಗಿ ರೋಷನಿ ಪ್ರಕಾಶ್ ಜೊತೆಯಾಗಿದ್ದಾರೆ. ಚಿತ್ರ ಡಾ.ರಾಜ್​ಕುಮಾರ್ ಪುಣ್ಯ ಸ್ಮರಣೆಯಂದೇ ತೆರೆಕಾಣ್ತಿಯಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv