ಶ್ರೀರಾಮನವಮಿಗೆ ಶುಭಕೋರಿದ ‘ರೋರಿಂಗ್​ ಸ್ಟಾರ್’..!

ಏಕಪತ್ನಿ ವ್ರತಸ್ಥ, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮದಿನ ಇಂದು. ಹಾಗಾಗಿ ದೇಶಾದ್ಯಂತ ಜನತೆ ಪಾನಕ, ಫಲಹಾರ ಹಂಚುವ ಮೂಲಕ ಅತ್ಯಂತ ಸಂಭ್ರಮದಿಂದ ರಾಮನವಮಿಯನ್ನು ಆಚರಿಸುತ್ತಿದ್ದಾರೆ. ಹಲವು ಸ್ಟಾರ್​​ಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ದೇಶದ ಜನತೆಗೆ ಶುಭ ಹಾರೈಸುತ್ತಿದ್ದಾರೆ. ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಗೆಳೆಯರ ಜೊತೆ ಹ್ಯಾಪಿ ಮೂಡ್​ನಲ್ಲಿ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ಜಾಲಿ ರೈಡ್​ನಲ್ಲಿ ಶುಭಕೋರಿದ ಶ್ರೀಮುರಳಿ..!
ನಾಡಿನ ಜನತೆ ಇಂದು ಅತಿ ಸಡಗರದಿಂದ ರಾಮನವಮಿ ಆಚರಣೆ ಮಾಡುತ್ತಿದ್ದು ರೋರಿಂಗ್ ಶ್ರೀಮರಳಿ ಕೂಡ ವಿಭಿನ್ನವಾಗಿ ಶುಭಕೋರಿದ್ದಾರೆ. ಚಿತ್ರದ ಗೆಳೆಯರ ಜೊತೆ ಕಾರ್​ನಲ್ಲಿ ಜಾಲಿ ರೈಡ್ ಮಾಡ್ತಾ ಒಬ್ಬೊಬ್ಬ ಸ್ನೇಹಿತರನ್ನು ವಿಶೇಷವಾಗಿ ಪರಿಚಯ ಮಾಡೋ ಮೂಲಕ ಕನ್ನಡನಾಡಿನ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಷಯಗಳು ಅಂತಾ ಹೇಳಿದ್ದಾರೆ. ಸದ್ಯ ರಾಮನವಮಿ ಹಬ್ಬದ ಸಂತಸದ ವಿಡಿಯೋವನ್ನು ಶ್ರೀಮುರಳಿ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.