ಬೆಳ್ಳಂಬೆಳಗ್ಗೆ ಶ್ರೀಲಂಕಾದಲ್ಲಿ ಸರಣಿ ಬ್ಲಾಸ್ಟ್​, 3 ಚರ್ಚ್​​​, ಐದು 5 ಸ್ಟಾರ್​ ಹೋಟೆಲ್​​ನಲ್ಲಿ ಸ್ಫೋಟ..!

ಕೋಲಂಬೊ, ಶ್ರೀಲಂಕಾ: ಈಸ್ಟರ್​ ಸಂಡೇ ಪ್ರೇಯರ್​​ ವೇಳೆ ಶ್ರೀಲಂಕಾದ ಮೂರು ಚರ್ಚ್​ಗಳಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಅಲ್ಲದೇ ಕೋಲಂಬೊದ ಮೂರು ಐಶಾರಾಮಿ 5 ಸ್ಟಾರ್​ ಹೋಟೆಲ್​​​​ನಲ್ಲಿ ಕೂಡ ಸ್ಫೋಟ ಸಂಭವಿಸಿ ಶ್ರೀಲಂಕಾ ತಲ್ಲಣಿಸಿಹೋಗಿದೆ. ಸ್ಥಳೀಯ ಕಾಲಮಾನದಂತೆ ಇಂದು ಬೆಳಗಿನ ಜಾವ 8.45ರ ವೇಳೆ ಚರ್ಚ್​ಗಳಲ್ಲಿ ಸ್ಫೋಟ ಸಂಭವಿಸಿದೆ. ಈ ಸರಣಿ ಸ್ಫೋಟದಿಂದಾಗಿ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೋಲಂಬೋದ ಕೊಚಿಕಡೆ ಪ್ರದೇಶದಲ್ಲಿರೋ ಸೇಂಟ್ ಆಂಟೊನಿ ಚರ್ಚ್ ಹಾಗೂ ಕಟುವಾಪಿಟಿಯಾ ಮತ್ತು ಕಟಾನಾದಲ್ಲಿನ ಎರಡು ಚರ್ಚ್​​ಗಳಲ್ಲಿ ಬಾಂಬ್ ಸ್ಫೋಟಿಸಿದೆ. ಅಲ್ಲದೇ ಕೋಲಂಬೊದ ಶಾಂಗ್ರಿ-ಲಾ ಹಾಗೂ ಕಿಂಗ್ಸ್​​ಬರಿ ​ಫೈವ್​ಸ್ಟಾರ್​ ಹೋಟೆಲ್​​ಗಳಲ್ಲಿ ಕೂಡ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್​​​ ವಕ್ತಾರ ರುವಾನ್ ಗುಣಶೇಖರ್ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv