‘ಸಂವಿಧಾನವನ್ನು ರಾಮಾಯಣ, ಮಹಾಭಾರತದಷ್ಟೇ ಗೌರವಿಸುತ್ತಿದ್ದೇವೆ, ದಲಿತರು ಬಿಜೆಪಿಗೆ ಮತ ನೀಡಿ’

ಮೈಸೂರು: ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 128ನೇ ಜಯಂತೋತ್ಸವದ ಹಿನ್ನೆಲೆಯಲ್ಲಿ ಹಲವು ರಾಜಕೀಯ ಮುಖಂಡರು ಅಂಬೇಡ್ಕರ್​ ಪ್ರತಿಮೆಗೆ ಪುಷ್ಮ ನಮನ ಸಲ್ಲಿಸಿದ್ರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸತೀಶ್ ಜಾರಕೀಹೋಳಿ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು.

ಈ ವೇಳೆ ಮಾತನಾಡಿದ  ಶಾಸಕ ಶ್ರೀರಾಮುಲು,  ಪರಿವಾರ, ತಳವಾರ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರಕ್ರಿಯೆಗೆ ಸಮಸ್ಯೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿವಾರ, ತಳವಾರ ಸಮುದಾಯದ ಬಗ್ಗೆ ಕಾಳಜಿ‌ ತೋರಿತ್ತು. ಪರಿಶಿಷ್ಟ ವರ್ಗಕ್ಕೆ ಸೇರಿಸಲು ಶಿಫಾರಸ್ಸು ಮಾಡಲಾಗಿತ್ತು.  ಸದ್ಯ ಮಸೂದೆ ರಾಜ್ಯಸಭೆಯಲ್ಲಿದೆ. ಬಿಜೆಪಿಗೆ ಮತ್ತೊಂದು ಅವಕಾಶ ನೀಡಿ, ಮುಂದಿನ ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ರಾಮಾಯಣ, ಮಹಾಭಾರತದಷ್ಟೇ ಪವಿತ್ರ ಗ್ರಂಥ ಎಂದು ಗೌರವಿಸುತ್ತಿದ್ದೇವೆ. ಆದ್ದರಿಂದ ದಲಿತ ಸಮುದಾಯವರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದ್ರು.

ಸೆಲ್ಫಿ ತೆಗೆದುಕೊಂಡೋರೆಲ್ಲ ನಾಯಕ ಸಮುದಾಯದ ನಾಯಕರಲ್ಲ: ಸತೀಶ್ ಜಾರಕಿಹೊಳಿ ಕಿಡಿ

ಇದೇ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಪ್ರಚಾರ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಮೈತ್ರಿಗಳಿಗೆ ಒಳ್ಳೆ ವಾತಾವರಣ ಇದೆ. ನಾಯಕ ಸಮುದಾಯ ಮತಗಳು ಬಿಜೆಪಿಗೆ ಸೀಮಿತವಾಲ್ಲ. ತಳವಾರ ಹಾಗೂ ಪರಿವಾರ ಎಸ್​ಟಿಗೆ ಸೇರಿಸಲು ನಮ್ಮ ಕೊಡುಗೆ ಕೂಡ ಇದೆ. ಬಿಜೆಪಿ ಮಾತ್ರ ಹೋರಾಟ ಮಾಡಿಲ್ಲ. ಪ್ರತಿ ಚುನಾವಣೆಯಲ್ಲಿ ಮತ ಕೇಳಲು ಇದೊಂದೇ ಹೇಳುತ್ತಾರೆ. ನಾಯಕ ಸಮುದಾಯಕ್ಕೆ ಶ್ರೀರಾಮುಲು ಸ್ವಯಂ ಘೋಷಿತ ನಾಯಕರಲ್ಲ. ಸೆಲ್ಫಿ ತೆಗೆದುಕೊಂಡೊರಲ್ಲ ನಾಯಕ ಸಮುದಾಯದ ನಾಯಕರಲ್ಲ. ಫಲಿತಾಂಶದ ನಂತರ ಯಾರು ನಾಯಕರು ಅಂತಾ ಗೊತ್ತಾಗುತ್ತೆ ಎಂದು  ಶ್ರೀ ರಾಮುಲುಗೆ ತಿರುಗೇಟು ನೀಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv