ವ್ಯಾಲೆಂಟೈನ್ಸ್​ ಡೇ ಬದಲು ತಂದೆ-ತಾಯಿಯನ್ನು ಪೂಜಿಸಿ: ಪ್ರಮೋದ್​ ಮುತಾಲಿಕ್​​

ಉಡುಪಿ: ವ್ಯಾಲೆಂಟೈನ್ಸ್​ ಡೇ ಬದಲು ತಂದೆ ತಾಯಿಯನ್ನು ಪೂಜಿಸಿ. ಕ್ರಿಶ್ಚಿಯನ್ನರ ವ್ಯಾಲೆಂಟೈನ್ಸ್​ ಸಂಸ್ಕೃತಿ ನಮಗೆ ಬೇಡ. ಈ ಕುರಿತಾಗಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಹೇಳಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ಪ್ರೇಮಿಗಳ ದಿನದ ಬಗ್ಗೆ ದುರ್ಗಾಸೇನೆ ಮೂಲಕ ಜಾಗೃತಿ ಮೂಡಿಸುತ್ತೇವೆ. ಪ್ರೇಮಿಗಳ ದಿನಾಚರಣೆದಂದು ಪೊಲೀಸರೊಂದಿಗೆ ಕೈ ಜೋಡಿಸುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ. ಪಾರ್ಕ್, ರಸ್ತೆ ಗಳಲ್ಲಿ ಯಾವುದೇ ಕುಕೃತ್ಯ ಕಂಡರೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಅಸಹ್ಯ, ಅಶ್ಲೀಲ, ಅಸಭ್ಯತೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದರು.
ಬಳಿಕ ರಾಜ್ಯ ರಾಜಕೀಯ ಬಗ್ಗೆ ಮಾತನಾಡಿದ ಅವರು, ರಾಜ್ಯ ರಾಜಕೀಯ ಅಸಹ್ಯಕರವಾಗಿದೆ. ಮೂರೂ ಪಕ್ಷ ಧಿಕ್ಕರಿಸಿ ಹೊಸ ಪಕ್ಷ ಮಾಡುವ ಅನಿವಾರ್ಯತೆಯಿದೆ.

 


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv