ಶ್ರೀಲಂಕಾ ಸರಣಿ ಸ್ಫೋಟ, ಸೇಫಾಗಿ ಮೈಸೂರಿಗೆ ಮರಳಿದ 14 ಪ್ರವಾಸಿಗರು

ಮೈಸೂರು: ಶ್ರೀಲಂಕಾ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 3 ದಿನಗಳ ಬಳಿಕ ಸೇಫ್ ಆಗಿ 5 ಕುಟುಂಬದ 14 ಮಂದಿ ಮೈಸೂರಿಗೆ ವಾಪಸ್‌ ಆಗಿದ್ದಾರೆ. ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್ ಸೇರಿ 14 ಮಂದಿ ಮೈಸೂರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಪ್ರವಾಸಕ್ಕೆಂದು ಮೈಸೂರಿನಿಂದ ಶ್ರೀಲಂಕಾಗೆ 14 ಮಂದಿ ತೆರಳಿದ್ದರು. ಯಾವುದೇ ಪ್ರಾಣಾಪಾಯ ಇಲ್ಲದೇ ಮಧ್ಯರಾತ್ರಿ ಮೈಸೂರಿಗೆ 14 ಜನರು ವಾಪಸ್ ಬಂದಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ  5ಕ್ಕೂ ಹೆಚ್ಚು ಕನ್ನಡಿಗರು ಪ್ರಾಣ ಕಳೆದುಕೊಂಡಿದ್ದರು. ಇದರಿಂದ ಕುಟುಂಬಸ್ಥರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇದೀಗ ಸೇಫ್ ಆಗಿ 14 ಮಂದಿ ವಾಪಸ್ ಬರೋ ಮೂಲಕ ಕುಟುಂಬಸ್ಥರ ಆತಂಕ ದೂರಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv