ಶ್ರೀಲಂಕಾದಲ್ಲಿ ಇನ್ನೂ ನಿಂತಿಲ್ಲ, ಉಗ್ರರ ವಿಸ್ಫೋಟದ ಕೃತ್ಯ..!

ಕೊಲೊಂಬೋ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್​ ಸ್ಫೋಟದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಈ ಘಟನೆಯ ಹಿಂದೇ ವಿದೇಶಿ ಉಗ್ರ ಸಂಘಟನೆಯ ಕೈವಾಡ ಇದೆ ಅನ್ನೋದು ದೃಢವಾಗಿದೆ. ಇದರ ಬೆನ್ನಲ್ಲೆ ಪ್ರಧಾನಿ ರನೀಲ್​ ವಿಕ್ರಮಸಿಂಘೇ ನಮ್ಮ ದೇಶದ ಪ್ರಜೆಗಳು ಬಾಂಬ್​ಗಳ ಮಧ್ಯೆ ಓಡಾಡುತ್ತಿದ್ದಾರೆ ಅಂತಾ ಭವಿಷ್ಯದಲ್ಲಿ ಸಂಭವಿಸಬಹುದಾದ ವಿಸ್ಫೋಟಕ ಕೃತ್ಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಸಿಂಘೇ ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ಗುಪ್ತಚರ ಮಾಹಿತಿ ತಮಗೆ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಕುರಿತು ಭಾರತವೂ ತಿಳಿಸಿದ ಗುಪ್ತಚರ ಮಾಹಿತಿಯನ್ನು ತಮಗೆ ನೀಡದ ರಕ್ಷಣಾ ಮುಖ್ಯಸ್ಥರ ತಲೆದಂಡ ಪಡೆಯುವ ಸುಳಿವನ್ನು ನೀಡಿದ್ದಾರೆ. ಇನ್ನು ಶ್ರೀಲಂಕಾದ ಕೊಲೊಂಬೋ ಏರ್​ಪೋರ್ಟ್​ನ ಬಳಿ ಮತ್ತೊಂದು ಪೈಪ್​ ಬಾಂಬ್​ ಪತ್ತೆಯಾಗಿದೆ. ಅಲ್ಲದೇ ಒಂದು ಲಾರಿ ಹಾಗೂ ನಾಲ್ಕಕ್ಕೂ ಹೆಚ್ಚು ಬೈಕ್​ಗಳಲ್ಲಿ ಆತ್ಮಾಹುತಿ ದಾಳಿಗೆ ಬಾಂಬ್​ಗಳನ್ನ ಇಡಲಾಗಿದೆ ಎನ್ನುವ ಮಾಹಿತಿ ಶ್ರೀಲಂಕಾದ ಭದ್ರತಾ ಪಡೆಗಳಿಗೆ ಸಿಕ್ಕಿದೆ. ಈ ಸಂಬಂಧ ಒಂದು ಬೈಕ್​ನಲ್ಲಿದ್ದ ವಿಸ್ಫೋಟಕವನ್ನು ನಿಷ್ಕ್ರೀಯಗೊಳಿಸಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv