ಶ್ರೀಲಂಕಾ ಸರಣಿ ಸ್ಫೋಟ: ಇಂದು ಮಧ್ಯರಾತ್ರಿಯಿಂದಲೇ ತುರ್ತು ಪರಿಸ್ಥಿತಿ ಘೋಷಣೆ

ಕೊಲಂಬೋ: 300ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್​ ಸ್ಫೋಟದ ಹಿಂದೆ ನ್ಯಾಷನಲ್​​ ಥೋವೀತ್​​ ಜಮಾತ್​​ ಎಂಬ ಸ್ಥಳೀಯ ಸಂಘಟನೆಯ ಕೈವಾಡವಿರಬಹುದು ಎಂದು ಶ್ರೀಲಂಕಾ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಶ್ರೀಲಂಕಾ ಸರ್ಕಾರದ ವಕ್ತಾರ ಹಾಗೂ ಸಂಪುಟ ಸಚಿವ ರಜಿತಾ ಸೇನರತ್ನೇ ಮಾತನಾಡಿ, ಈ ಸಂಘಟನೆಗೆ ಅಂತರಾಷ್ಟ್ರೀಯ ಬೆಂಬಲವಿದೆಯಾ.? ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ನ್ಯಾಷನಲ್​​ ಥೋವೀತ್​​ ಜಮಾತ್ ಸಂಘಟನೆ ಚರ್ಚ್​​​ಗಳು ಹಾಗೂ ಭಾರತೀಯ ಹೈಕಮಿಷನ್ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂದು ಶ್ರೀಲಂಕಾದ ಪೊಲೀಸ್​ ಮುಖ್ಯಸ್ಥರು ಏಪ್ರಿಲ್​​ 11ರಂದೇ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.  ಥೋವೀತ್​​ ಜಮಾತ್ ಸಂಘಟನೆ ಬಗ್ಗೆ ಸದ್ಯಕ್ಕೆ ಹೆಚ್ಚಿನದ್ದೇನೂ ತಿಳಿದುಬಂದಿಲ್ಲ. ಈ ಹಿಂದೆ ಬುದ್ಧನ ವಿಗ್ರಹಗಳನ್ನ ಹಾನಿ ಮಾಡಿದ್ದರಲ್ಲಿ ಈ ಸಂಘಟನೆಯ ಲಿಂಕ್ ಇದೆ ಎಂದು ಹೇಳಲಾಗಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ 24 ಜನರನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​​ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಸ್ಫೋಟದ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಜೊತೆಗೆ ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಗ್ಗೆ 4 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ನೀಡಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv