ಡಿಸಿಎಂ ಪರಮೇಶ್ವರ್​ ಭೇಟಿ ಮಾಡಿದ ಮಹಿಂದಾ ರಾಜಪಕ್ಸೆ

ಬೆಂಗಳೂರು: ಶ್ರೀಲಂಕಾ ಮಾಜಿ ರಾಷ್ಟ್ರಾಧ್ಯಕ್ಷ ಮಹಿಂದಾ ರಾಜಪಕ್ಸೆಯವರು ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಅವರನ್ನ ಭೇಟಿ ಮಾಡಿದ್ದಾರೆ. ಸದಾಶಿವನಗರದಲ್ಲಿರುವ ಡಿಸಿಎಂ ಅಧಿಕೃತ ನಿವಾಸಕ್ಕೆ ಇಂದು ಆಗಮಿಸಿದ ಮಹಿಂದಾ ರಾಜಪಕ್ಸೆಯವರನ್ನು ಪರಮೇಶ್ವರ್ ಬರಮಾಡಿಕೊಂಡರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಭೇಟಿ..
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ಬಳಿಕ ಮಹಿಂದ ರಾಜಪಕ್ಸೆ ಪದ್ಮನಾಭನಗರಕ್ಕೆ ತೆರಳಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದರು.

 


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv