ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣ ಐಸಿಸ್​?, ನ್ಯೂಜಿಲೆಂಡ್​ನ ಪ್ರತೀಕಾರ!

ದೆಹಲಿ: ನಿನ್ನೆ ಶ್ರೀಲಂಕಾದಲ್ಲಿ ಚರ್ಚ್​ ಸೇರಿದಂತೆ ವಿವಿದೆಡೆ ನಡೆದ ಸರಣಿ ಬಾಂಬ್​ ಸ್ಫೋಟದ ಹೊಣೆಯನ್ನು ಯಾವೊಂದು ಉಗ್ರಗಾಮಿ ಸಂಘಟನೆಯು ಹೊತ್ತುಕೊಂಡಿಲ್ಲ. ಆದರೆ, ಐಸಿಸ್​ ಉಗ್ರರಿಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟರ್​ಗಳು ಹರಿದಾಡ್ತಿದ್ದು, ಅದರಲ್ಲಿ ದಾಳಿಕೋರರಿಗಾಗಿ ಪ್ರಾರ್ಥನೆ ನಡೆಸಲಾಗಿದೆ. ಅಲ್ಲದೇ ಈ ಬಾಂಬ್​ ಸ್ಫೋಟ ನ್ಯೂಜಿಲೆಂಡ್​ನಲ್ಲಿ ಇತ್ತಿಚೆಗೆ ನಡೆದ ಪ್ರಾರ್ಥನಾ ಮಂದಿರದ ಮೇಲಿನ ದಾಳಿಗೆ ಪ್ರತೀಕಾರ ಅಂತಾ ಬರೆಯಲಾಗಿದೆ. ಮೇಲಾಗಿ ಐಸಿಸ್​ ನಡೆಸುವ ಬಾಂಬ್​ ಸ್ಫೋಟದಂತಹ ಕೃತ್ಯಗಳಿಗೂ ನಿನ್ನೆ ನಡೆದ ಸರಣಿ ಸ್ಫೋಟಕ್ಕೂ ಸಾಮ್ಯತೆ ಇದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಈ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನೂ ಅಲ್​ಕೈದಾ ಉಗ್ರ ಸಂಘಟನೆ, ನ್ಯೂಜಿಲೆಂಡ್​ನಲ್ಲಿ ನಡೆದಿದ್ದ ಪ್ರಾರ್ಥನಾ ಮಂದಿರದ ಮೇಲಿನ ದಾಳಿ ಬಳಿಕ , ಧಾರ್ಮಿಕ ಮುಖಂಡರನ್ನು ಹಾಗೂ ಒಂದೆಡೆ ಧಾರ್ಮಿಕ ಆಚರಣೆಗಾಗಿ ಸೇರುವವರನ್ನು ಟಾರ್ಗೆಟ್ ಮಾಡಿ ಅಂತಾ ಕರೆಕೊಟ್ಟಿತ್ತು. ಅದಾಧ ಬಳಿಕ ಚರ್ಚ್​ನಂತಹ ಸ್ಥಳಗಳಲ್ಲಿ ದಾಳಿ ನಡೆಸದಿರಿ ಅಂತಾ ತನ್ನ ಸಂಘಟನೆಯ ಸದಸ್ಯರಿಗೆ ತಿಳಿಸಿತ್ತು. ಸದ್ಯ ಹರಿದಾಡ್ತಿರುವ ಪೋಸ್ಟ್​ರಗಳ ಪ್ರಕಾರ ಇದು ಐಸಿಸ್​ ನಡೆಸಿದ ವಿದ್ವಂಸಕ ಕೃತ್ಯ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೆ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv