ಶ್ರೀಲಂಕಾ ಬಾಂಬ್​ ಸ್ಫೋಟದಲ್ಲಿ ಬಾಂಗ್ಲಾ ದೇಶದ ಪ್ರಧಾನಿಯ ಸಂಬಂಧಿ ನಾಪತ್ತೆ

ಢಾಕಾ: ಶ್ರೀಲಂಕಾದಲ್ಲಿ ನಿನ್ನೆ 8 ಕಡೆಗಳಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾರ ಸಂಬಂಧಿ ಕೂಡ ನಾಪತ್ತೆಯಾಗಿದ್ದಾರಂತೆ. ಹೀಗಂತ ಸ್ವತಃ ಅವರೆ ಹೇಳಿಕೊಂಡಿದ್ದಾರೆ. ಅಲ್ಲಿನ ಸುದ್ದಿಮಾದ್ಯಮಗಳ ವರದಿ ಪ್ರಕಾರ ಅವಾಮಿ ಲೀಗ್​ ಶೇಖ್​ ಸಲೀಮ್​ರ ಅಳಿಯ ಹಾಗೂ ಮೊಮ್ಮಗಳು ಬಾಂಬ್ ಸ್ಫೋಟಗೊಂಡ ರೆಸ್ಟೋರಂಟ್​ನಲ್ಲಿ ಊಟ ಮಾಡುತ್ತಿದ್ದರಂತೆ. ಘಟನೆ ಬಳಿಕ ಮೊಮ್ಮಗಳು ಕಾಣೆಯಾಗಿದ್ದಾಳೆ ಎನ್ನಲಾಗಿದೆ. ಶೇಖ್​ ಸಲೀಮ್​ ಅವಾಮಿ ಲೀಗ್​​ನ ಮುಖಂಡರಷ್ಟೆ ಅಲ್ಲದೇ ಪ್ರಧಾನಿ ಶೇಖ್​ ಹಸೀನಾರ ಸಹೋದರ ಕೂಡ ಆಗಿದ್ದಾರೆ. ಇನ್ನೂ ಘಟನೆಯನ್ನು ಖಂಡಿಸಿರುವ ಶೇಖ್​ ಹಸೀನಾ, ಈ ಘಟನೆಯಲ್ಲಿ ತಮ್ಮ ಸಂಬಂಧಿ ನಾಪತ್ತೆಯಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv