ಶ್ರೀಲಂಕಾದಲ್ಲಿ ಸರಣಿ ಸ್ಫೋಟ, ನ್ಯೂಜಿಲ್ಯಾಂಡ್ ಘಟನೆಯ ಪ್ರತೀಕಾರ: ಐಸಿಸ್​

ದೆಹಲಿ: 3 ಚರ್ಚ್​, 3 ಹೋಟೆಲ್​ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಸಂಭವಿಸಿದ ಸರಣಿ ಬಾಂಬ್​ ಸ್ಫೋಟಕ್ಕೆ ತಾನೇ ಕಾರಣ ಅಂತಾ ಐಸಿಸ್​ ಉಗ್ರ ಸಂಘಟನೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಸಂಬಂಧ ಉಗ್ರ ಸಂಘಟನೆಯ ನ್ಯೂಸ್​ ಏಜೆನ್ಸಿ ಒಮ್ಯಾಕ್​ ವಿಡಿಯೊವೊಂದನ್ನು ಕೂಡ ಬಿಡುಗಡೆ ಮಾಡಿದೆ. ಸುಮಾರು ಒಂದು ನಿಮಿಷದ ವಿಡಿಯೋದಲ್ಲಿ 8 ಮಂದಿ ಉಗ್ರರು , ಆತ್ಮಾಹುತಿ ದಾಳಿಗೆ ಕೈಜೋಡಿಸ್ತಿರುವುದ ದೃಶ್ಯ ಸೆರೆಯಾಗಿದೆ. ಇನ್ನೊಂದೆಡೆ ಏಳು ಉಗ್ರರ ಹೆಸರನ್ನು ರಿಲೀಸ್​ ಮಾಡಿರುವ ಐಸಿಸ್​ ಅಬು ಉಬ್ಯಾದಾ, ಅಬು ಅಲ್​ ಮುಖ್ತಾರ್​, ಅಬು ಖಲೀಲ್​, ಅಬು ಹಮ್ಜಾ, ಅಬು ಅಲ್​ ಬಾರಾ, ಅಬು ಮೊಹಮ್ಮದ್​ ಮತ್ತು ಅಬು ಅಬ್ದುಲ್ಲಾ ಈ ವಿಸ್ಫೋಟಕ ಕೃತ್ಯವೆಸಗಿದವರು ಅಂತಾ ತಿಳಿಸಿದೆ. ಇನ್ನೂ ಹಶೀಮ್​ ಇದರ ಮಾಸ್ಟರ್ ಮೈಂಡ್​ ಆಗಿದ್ದಾನೆ ಅಂತಾ ಹೇಳಲಾಗಿದೆ. ಐಸಿಸ್​ನ ಅಬು ಬಕರ್​ ಅಲ್​ ಬಾಗ್ದಾದಿ ಹೆಸರಲ್ಲಿ, ಆತ್ಮಾಹುತಿ ದಾಳಿ ಶಪಥ ಮಾಡುವ ವಿಡಿಯೊವೊಂದನ್ನು ಒಮ್ಯಾಕ್​ ರಿಲೀಸ್​ ಮಾಡಿದೆ. ಇನ್ನೂ ನ್ಯೂಜಿಲ್ಯಾಂಡ್​ನಲ್ಲಿ ಪ್ರಾರ್ಥನಾ ಮಂದಿರದ ಮೇಲೆ ನಡೆದ ಅಪ್ರಚೋದಿತ ಗುಂಡಿನದಾಳಿಗೆ ಪ್ರತೀಕಾರವಾಗಿ ಈ ಕೃತ್ಯವೆಸಗಲಾಗಿದೆ ಎನ್ನಲಾಗ್ತಿದ್ದು, ಇದಕ್ಕೆ ಪೂರಕವಾದ ಪೋಸ್ಟರ್​ಗಳನ್ನು ಒಮ್ಯಾಕ್​ ಬಿಡುಗಡೆ ಮಾಡಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv