ಶ್ರೀಲಂಕಾ ಸ್ಫೋಟ; ಬೆಂಗಳೂರು ಪೊಲೀಸ್ ಕಮೀಷನರ್​ ಜೊತೆ ಪ್ರಮುಖ ಧಾರ್ಮಿಕ ಮುಖ್ಯಸ್ಥರ ಸಭೆ

ಬೆಂಗಳೂರು: ಶ್ರೀಲಂಕಾದಲ್ಲಿ ಸರಣಿ ಬಾಂಬ್​ಗಳು ಸ್ಫೋಟಿಸಿ 350ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಭಾರತದ ಸಿಲಿಕಾನ್ ವ್ಯಾಲಿ, ಐಟಿ ಸಿಟಿ ಬೆಂಗಳೂರಿನ ಪೊಲೀಸರೂ ಫುಲ್​​ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಇಂದು ಸಂಜೆ ನಾಲ್ಕು ಗಂಟೆಗೆ ಕಮೀಷನರ್ ಕಚೇರಿಯಲ್ಲಿ ಸಭೆ ಕರೆದಿದ್ದು, ಪ್ರಮುಖ ಮಂದಿರ, ಮಸೀದಿ, ಚರ್ಚ್, ಮಾಲ್ ಹಾಗೂ ಹೋಟೆಲ್​​ಗಳ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ನಗರದ ಎಲ್ಲಾ ವಿಭಾಗದ 8 ಡಿಸಿಪಿಗಳು, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು ಭಾಗಿಯಾಗಲಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹಾಗೂ ಅಲೋಕ್ ಕುಮಾರ್ ಸಭೆಯಲ್ಲಿ ಸ್ಫೋಟಕಗಳ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಸಭೆಯಲ್ಲಿ  ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.

ದೇವಾಲಯಗಳು:
ಇಸ್ಕಾನ್, ಮಹಾಲಕ್ಷ್ಮಿ ಲೇಔಟ್ ಆಂಜನೇಯ ಸ್ವಾಮಿ, ಬುಲ್ ಟೆಂಪಲ್ ದೇವಸ್ಥಾನದ ಮುಖ್ಯಸ್ಥರು.

ಹೋಟೆಲ್​​ಗಳು:
ಪಂಚತಾರಾ ಹೋಟೆಲ್​​ಗಳಾದ ದಿ ಅಶೋಕ, ಶಾಂಗ್ರಿ-ಲಾ, ಐಟಿಸಿ ಗಾರ್ಡೇನಿಯಾ, ಲೀ ಮೆರಿಡಿಯನ್ ಹೋಟೆಲ್ ಮ್ಯಾನೇಜರ್​​ಗಳು ಹಾಗೂ ಸೆಕ್ಯೂರಿಟಿ ಮುಖ್ಯಸ್ಥರು.

ಚರ್ಚ್​ಗಳು:
ಶಿವಾಜಿನಗರ ಚರ್ಚ್, ಕೋಲ್ಸ್ ಪಾರ್ಕ್ ಚರ್ಚ್, ವಿವೇಕನಗರ ಚರ್ಚ್, ಪಾದ್ರಿಗಳು ಹಾಗೂ ಸೆಕ್ಯೂರಿಟಿ ಆಫಿಸರ್​ಗಳು

ಮಸೀದಿಗಳು:
ಸಿಟಿ ಮಾರ್ಕೆಟ್ ಮಸೀದಿ, ಕಾಟನ್ ಪೇಟೆ ದರ್ಗಾದ ಮೌಲ್ವಿಗಳು ಹಾಗೂ ಉಸ್ತುವಾರಿಗಳು

ಮಾಲ್‌ಗಳು:
ಮಂತ್ರಿ ಮಾಲ್, ಯುಬಿ ಸಿಟಿ, ಓರಾಯಲ್‌ ಮಾಲ್, ಸಿಟಿ ಮಾಲ್, ಫೀನಿಕ್ಸ್ ಮಾಲ್, ಗೋಪಾಲನ್ ಮಾಲ್, ಒನ್ಎಂಜಿ‌ ಮಾಲ್, ಎಸ್ಟೀಂ ಮಾಲ್, ಲಿಡೋ ಮಾಲ್, 4M ವ್ಯಾಲಿ ಮಾಲ್, ಮೀನಾಕ್ಷಿ ಮಾಲ್ ಮ್ಯಾನೇಜರ್​ಗಳು ಹಾಗೂ ಸೆಕ್ಯೂರಿಟಿ ಅಧಿಕಾರಿಗಳು.

ನಗರದ ಎಲ್ಲಾ ಪ್ರಮುಖ ಸರ್ಕಾರಿ ಕಚೇರಿಗಳ ಭದ್ರತಾ ಮುಖ್ಯಸ್ಥರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಇರದ ಕಚೇರಿ, ಮಂದಿರ, ಮಸೀದಿ, ಚರ್ಚ್​​ಗಳಿಗೆ ಆಯಾ ವಿಭಾಗದ ಡಿಸಿಪಿಗಳ ಸೂಚನೆಯಂತೆ ಭದ್ರತೆ ನಿಯೋಜನೆ ಮಾಡಲಾಗುವುದು ಎಂದು ತಿಳಿದುಬಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv