ಶ್ರೀಲಂಕಾ ಸ್ಫೋಟದಲ್ಲಿ ನಮ್ಮ ಸಂಬಂಧಿ ನಾಗರಾಜ ರೆಡ್ಡಿ ಮೃತಪಟ್ಟಿದ್ದಾರೆ : ರಾಮಲಿಂಗಾರೆಡ್ಡಿ

ಬೆಂಗಳೂರು: ಶ್ರೀಲಂಕಾ ಸರಣಿ ಸ್ಫೋಟದಲ್ಲಿ ಗಾಯಗೊಂಡಿದ್ದ ನಾಗರಾಜ ರೆಡ್ಡಿ ಮೃತಪಟ್ಟಿದ್ದಾರೆ ಅಂತಾ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದುರಂತದಲ್ಲಿ ನಾಗರಾಜರೆಡ್ಡಿ, ಪುರುಷೋತ್ತಮ ಅನ್ನೋರು ಗಾಯಗೊಂಡಿದ್ದರು. ಅವರಲ್ಲಿ ಪುರುಷೋತ್ತಮ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ನಾಗರಾಜರೆಡ್ಡಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಬ್ಬರೂ ನಮ್ಮ ಸಂಬಂಧಿಕರು ಹಾಗೂ ನಮ್ಮ ಕ್ಷೇತ್ರದವರೇ ಆಗಿದ್ದಾರೆ. ಘಟನೆ ನಡೆದುಹೋಗಿದೆ, ಏನೂ ಮಾಡಲು ಸಾಧ್ಯವಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv