ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಕೋರನ ಬಗ್ಗೆ ಇಂಚಿಂಚೂ ಮಾಹಿತಿ ಕೊಟ್ಟಿತ್ತು ಭಾರತ..!

ದೆಹಲಿ: ಝಹರನ್​ ಹಶೀಮ್​ ಈತನಿಗೆ ಭಾರತದಲ್ಲಿ ಸೆರೆಸಿಕ್ಕ ಶಂಕಿತ ಐಸಿಸ್​ ಉಗ್ರನೊಬ್ಬ ಆತ್ಮಾಹುತಿ ದಾಳಿ ಬಗ್ಗೆ ಶ್ರೀಲಂಕಾದಲ್ಲೇ ತರಬೇತಿ ನೀಡಿದ್ದಾನೆ ಎಚ್ಚರವಿರಲಿ ಅಂತಾ ಅಲ್ಲಿನ ಸರ್ಕಾರದ ಭಾರತದ ಭದ್ರತಾ ಸಂಸ್ಥೆಗಳು ಮೊದಲೇ ಎಚ್ಚರಿಕೆ ನೀಡಿದ್ದವು. ಈ ಬಗ್ಗೆ ಇದೀಗ ಪೂರಕ ಮಾಹಿತಿ ಹೊರಬಿದ್ದಿದ್ದು, ಕೇಂದ್ರದ ಗುಪ್ತಚರ ಸಂಸ್ಥೆ ಹಾಗೂ ಎನ್​ಐಎ ಶ್ರೀಲಂಕಾದಲ್ಲಿ ಅತಿದೊಡ್ಡ ದುಷ್ಕೃತ್ಯಗಳು ಸಂಭವಿಸಲಿದೆ, ಉಗ್ರ ಸಂಘಟನೆ ಎನ್​ಟಿಜೆ ಐಸಿಸ್​ನೊಂದಿಗೆ ಸೇರಿ, ಈ ಕೃತ್ಯವೆಸಗಲಿದೆ ಅದರ ರೂವಾರಿ ಝಹರನ್​ ಹಶೀಮ್​ ಆಗಿರಲಿದ್ದಾನೆ. ಆತನ ಚಹರೆ ಹೀಗೀಗೆ ಇದೆ ಎನ್ನುವ ಪಿನ್​ ಟು ಪಿನ್​ ಮಾಹಿತಿಯನ್ನು ಶ್ರೀಲಂಕಾದ ಭದ್ರತಾ ಸಂಸ್ಥೆಗಳಿಗೆ ನೀಡಿದ್ದವು. ಆದರೆ, ಶ್ರೀಲಂಕಾ ಸರ್ಕಾರದೊಳಗಿನ ಒಳಜಗಳದ ಮಧ್ಯೆ ಭಾರತ ಸರ್ಕಾರ ನೀಡಿದ ಮಾಹಿತಿ ನಿರ್ಲಕ್ಷ್ಯಕ್ಕೆ ಒಳಗಾಯ್ತು ಎನ್ನಲಾಗಿದೆ. ಇನ್ನೂ, ಎನ್​ಐಎ ನೀಡಿದ ಮಾಹಿತಿಯಂತೆ ಹಶೀಮ್​ ಶ್ರೀಲಂಕಾದಲ್ಲಿನ ಉಗ್ರರಿಗೆ ತರಬೇತಿ ನೀಡಿ ಆತ್ಮಾಹುತಿ ದಾಳಿ ನಡೆಸಿದ್ದಾನೆ. ಈತನೇ ಮುಖವೇ ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಐಸಿಸ್​ ಕೂಡ ಈತನ ವಿಡಿಯೋವನ್ನ ರಿಲೀಸ್ ಮಾಡಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv