‘ಚಾತಕ ಪಕ್ಷಿ’ ಕಣ್ಣಿಗೆ ಬಿದ್ದರೆ ಮಳೆ ಆಗೋದು ಗ್ಯಾರಂಟೀನಾ!?

ಬೆಂಗಳೂರು: ನಿಮಗೆ ಚಾತಕ ಪಕ್ಷಿಯ ಬಗ್ಗೆ ಹೇಳಬೇಕು ಅನಿಸುತ್ತಿದೆ. ಈ ಪಕ್ಷಿಯ ಬಗ್ಗೆ ಒಂದಷ್ಟು ಹೇಳಲೇಬೇಕು. ಅದೂ ಮಳೆಗಾಲ ಕಾಲಿಟ್ಟಿರುವಾಗ ..
ಮಳೆಗೂ ಚಾತಕ ಪಕ್ಷಿಗೂ ಅವಿನಾಭಾವ ಸಂಭಂಧವಿದೆ. ಇದನ್ನು ಇಂಗ್ಲೀಷಿನಲ್ಲಿ Pied Cuckoo, Jacobin Cuckoo, or Pied Crested Cuckoo ಎಂದು ಕರೆಯುತ್ತಾರೆ. Pied Kingfisher (Papiha) ಅಂತಲೂ ಹೇಳುತ್ತಾರೆ. ಇದು ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತದೆ. ಜಾನಪದದಲ್ಲಿ ಮತ್ತು ಪುರಾಣಗಳಲ್ಲಿ ಈ ಪಕ್ಷಿಗೆ ವಿಶೇಷ ಸ್ಥಾನವಿದೆ. ಮಳೆಗಾಲದ ನಾಲ್ಕು ಹನಿಗಳಿಗೆ ಈ ಚಾತಕ ಪಕ್ಷಿ ನಿಜಕ್ಕೂ ಚಾತಕ ಪಕ್ಷಿಯಂತೆ ಕಾದುಕುಳಿತಿರುತ್ತದೆ. ಮೇ ತಿಂಗಳ ಕೊನೆಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಚಾತಕ ಪಕ್ಷಿ ಕಣ್ಣಿಗೆ ಬೀಳುತ್ತದೆ.

ಇದು ಮನುಷ್ಯರಿಗೆ ಕಾಣಿಸಿಕೊಂಡರೆ ಆ ಭಾಗದಲ್ಲಿ ಖಂಡಿತ ಮಳೆ ಆಗುತ್ತದೆ ಎನ್ನುತ್ತದೆ ಜನಪದ. ಚಾತಕ ಪಕ್ಷಿಗೆ ಅದರ ತಲೆಯ ಮೇಲೆ ಕೊಕ್ಕೆ ತರಹ ಪುಕ್ಕ ಇರುತ್ತದೆ. ಆ ಕೊಕ್ಕೆಯಲ್ಲಿಯೇ ಅದು ಜೀವಜಲವನ್ನು ಸಂಗ್ರಹಿಸಿಟ್ಟುಕೊಂಡು ಹನಿ ಹನಿ ನೀರನ್ನು ಕುಡಿಯುವುದು. ಮೇಲಿಂದ ಬೀಳುವ ಮಳೆಯ ನೀರೇ ಚಾತಕಪಕ್ಷಿಗೆ ಆಧಾರ.

ನೀರಡಿಕೆಯಾದಾಗ ಮಳೆಗಾಗಿ ಪ್ರಾರ್ಥಿಸುವ ಚಾತಕ ಪಕ್ಷಿ!
ಏಕೆಂದರೆ ಇದಕ್ಕೆ ಕೆರೆ ನೀರು, ನದಿ ನೀರು ತರಹದ ನಿಂತ ನೀರನ್ನು ತನ್ನ ಕೊಕ್ಕೆಯಿಂದ ಕುಡಿಯಲು ಆಗದು. ನೀರಿಲ್ಲದೆ ಎಷ್ಟೋ ದಿನಗಳವರೆಗೆ ಇದು ಬದುಕಬಲ್ಲದು. ಈ ಪಕ್ಷಿಗೆ ನೀರಡಿಕೆ ಆದಾಗ ಅದು ವರುಣ ದೇವರಲ್ಲಿ ಪ್ರಾರ್ಥಿಸುತ್ತದೆಯಂತೆ. ಅದರ ಪ್ರಾರ್ಥನೆಯನ್ನು ಪ್ರತಿಸಲ ವರುಣ ದೇವನು ಮನ್ನಿಸುತ್ತಾ, ಅದಕ್ಕೆ ನೀರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಚಾತಕ ಪಕ್ಷಿಯ ನೀರಡಿಕೆ ತಣಿಸಲು ಮಳೆ ಆಗುತ್ತದೆ ಎಂದು ಹಳಬರು ಹೇಳುತ್ತಾರೆ. ಇಂತಿಪ್ಪ ಪಕ್ಷಿಯ ಬಗ್ಗೆ ಕವಿರತ್ನ ಕಾಳಿದಾಸ, ತನ್ನ ಮೇಘ ದೂತದಲ್ಲಿ ಪ್ರಸ್ತಾಪಿಸಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv