ಮತ್ತೊಂದು ಸ್ಫೋಟಕ್ಕೆ ರೆಡಿಯಾಗಿತ್ತು ಬೈಕ್​, ಬಾಂಬ್​ ತುಂಬಿದ್ದ ಗಾಡಿ ಸ್ಫೋಟಿಸಿದ ಲಂಕಾ

ಕೊಲೊಂಬೊ: ಸರಣಿ ಸ್ಫೋಟಗಳಿಂದಾಗಿ ಶ್ರೀಲಂಕ ಅಕ್ಷರಶಃ ಬೆಚ್ಚಿ ಬಿದ್ದಿದೆ. ಕಹಿ ಘಟನೆಯನ್ನ ಸುಧಾರಿಸಿಕೊಳ್ಳುತ್ತಿರುವ ನಡುವೆಯೇ ಮತ್ತೆ ಎಲ್ಲಿ, ಯಾವಾಗ ಸ್ಫೋಟ ಸಂಭವಿಸುತ್ತೋ ಅನ್ನೋ ಭಯದಲ್ಲಿ ಅಲ್ಲಿನ ಜನ ಇದ್ದಾರೆ. ಇದೀಗ ಲಂಕಾದ ಸವೊಯೈ ಸಿನೆಮಾದಲ್ಲಿ ನಡೆದುಹೋಗುತ್ತಿದ್ದ ಕುಕೃತ್ಯ ಒಂದನ್ನ ಅಲ್ಲಿನ ರಕ್ಷಣಾ ಸಿಬ್ಬಂದಿ ತಪ್ಪಿಸಿದ್ದಾರೆ.

ಶ್ರೀಲಂಕಾ ರಕ್ಷಣಾ ಸಚಿವ ರುವನ್ ವಿಜೆವರ್ದನೆ ಹೇಳುವಂತೆ, ಶ್ರೀಲಂಕಾದ ಸ್ಪೆಷಲ್ ಟಾಸ್ಕ್ ​ಫೋರ್ಸ್ ಶಂಕಿತ ಬೈಕ್​ ಒಂದನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ​ಬೈಕ್​​ನ ಸೀಟ್​​​ ಓಪನ್​ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆ ಸೀಟು ಸ್ಟ್ರಕ್ ಆಗಿತ್ತು. ಇನ್ನೇನು ಅದು ಬ್ಲಾಸ್​ ಆಗುವ ಹಂತದಲ್ಲಿದ್ದ ಅದನ್ನ ತಡೆದಿದ್ದಾರೆ. ಆದರೆ ಅದು ಬಾಂಬ್ ಅಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಇನ್ನು ಸರಣಿ ಸ್ಫೋಟದ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಇದೀಗ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ಏರಿದೆ. ಮೃತರಲ್ಲಿ 39 ಮಂದಿ ವಿದೇಶಿಗರು ಅನ್ನೋ ಮಾಹಿತಿಯನ್ನ ಅಲ್ಲಿನ ರಕ್ಷಣಾ ಸಚಿವರು ನೀಡಿದ್ದಾರೆ. 39 ಮಂದಿಯಲ್ಲಿ 17 ಜನರ ಮೃತದೇಹದ ಗುರುತು ಪತ್ತೆ ಆಗಿದೆ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾದಲ್ಲಿ ಇನ್ನೂ ನಿಂತಿಲ್ಲ, ಉಗ್ರರ ವಿಸ್ಫೋಟದ ಕೃತ್ಯ..!


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv